ಶುಕ್ರವಾರ, ಆಗಸ್ಟ್ 19, 2022
22 °C

ಗಾಂಜಾ ವಶ: ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾಂಡೇಲಿ: ನಗರ ಸಮೀಪದ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು ₹ 38 ಸಾವಿರ ಮೌಲ್ಯದ 1.9 ಕೆ.ಜಿ ಗಾಂಜಾ, ₹ 1,500 ನಗದನ್ನು ಜಪ್ತಿ ಮಾಡಿದ್ದಾರೆ.

ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಇಂದಿರಾನಗರದ ನಿವಾಸಿ, ಪೇಂಟರ್ ಚಾಂದಪಾಷಾ (22), ಅದೇ ತಾಲ್ಲೂಕಿನ ಬಂಗಾಲಿ ಕ್ಯಾಂಪ್‌ನ ವಿದ್ಯಾರ್ಥಿ ಪ್ರಣೀತ ಸಾಣಾ (19) ಬಂಧಿತರು. ಪೊಲೀಸರ ದಾಳಿಯ ಸಂದರ್ಭದಲ್ಲಿ ಮತ್ತಿಬ್ಬರು ಆರೋಪಿಗಳಾದ ದಾಂಡೇಲಿ ಪಟೇಲನಗರದ ಹುಸೇನಸಾಬ (24) ಹಾಗೂ ಮುಜಾಫರ್ ಖಾನ್ ತಪ್ಪಿಸಿಕೊಂಡಿದ್ದಾರೆ.

ಸರ್ಕಲ್ ಇನ್‌ಸ್ಪೆಕ್ಟರ್ ಪ್ರಭು ಗಂಗನಹಳ್ಳಿ, ಇನ್‌ಸ್ಪೆಕ್ಟರ್ ಯಲ್ಲಪ್ಪ.ಎಸ್, ಎ.ಎಸ್.ಐ.ಬಸವರಾಜ ವಕ್ಕುಂದ, ಹಿರಿಯ ಕಾನ್‌ಸ್ಟೆಬಲ್‌ಗಳಾದ ಪ್ರಶಾಂತ ಎ.ನಾಯ್ಕ, ನಿಂಗಪ್ಪ ನರೇಗಲ್, ಸಿಬ್ಬಂದಿ ಆದಪ್ಪ ವೈ ಧಾರವಾಡಕರ್, ಸಂತೋಷ ಚನ್ನಣ್ಣನವರ, ಚಿನ್ಮಯಾನಂದ ಪತ್ತಾರ, ಮಹಮ್ಮದ್ ಹನೀಫ್, ದಶರಥ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು