ಶುಕ್ರವಾರ, ಮೇ 27, 2022
22 °C

ನೀರಿನಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿದ್ದಾಪುರ: ತಾಲ್ಲೂಕಿನ ಕಾನಸೂರು ಬಾಳೂರು ಸಮೀಪದ ಹಂಚಳ್ಳಿ, ತಿರುಕಲಗುಂಡಿ ಹೊಳೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರಿನ ಸೆಳೆತಕ್ಕೆ ಸಿಕ್ಕಿ ಶನಿವಾರ ಮೃತಪಟ್ಟಿದ್ದಾರೆ.

ಮೃತರನ್ನು ಹಂಚಳ್ಳಿಯ ಚಂದನ ದಿನೇಶ ಹೆಗಡೆ (14) ಮತ್ತು ಆತನ ದೊಡ್ಡಪ್ಪನ ಮಗ ಶಿರಸಿ ತಾಲ್ಲೂಕಿನ ಕಬ್ಬೆಯ ವೆಂಕಟೇಶ ಗಜಾನನ ಹೆಗಡೆ (19) ಎಂದು ಗುರುತಿಸಲಾಗಿದೆ.

ಚಂದನ ಭೈರುಂಬೆ ಪ್ರೌಢಶಾಲೆಯ ಒಂಬತ್ತನೇ ತರಗತಿಯ ವಿದ್ಯಾರ್ಥಿಯಾಗಿದ್ದ. ವೆಂಕಟೇಶ ದ್ವಿತೀಯ ಪಿಯುನಲ್ಲಿ ತೇರ್ಗಡೆಯಾಗಿದ್ದ ವಿದ್ಯಾರ್ಥಿ ಎಂದು ಗೊತ್ತಾಗಿದೆ.. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.