ಮಂಗಳವಾರ, ಆಗಸ್ಟ್ 20, 2019
25 °C

ಮಾಜಿ ಶಾಸಕ ಉಮೇಶ ಭಟ್ ನಿಧನ

Published:
Updated:
Prajavani

ಶಿರಸಿ: ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಉಮೇಶ ಭಟ್ ಭಾವಿಕೇರಿ (72) ಮಂಗಳವಾರ ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ ಪತ್ನಿ ಇದ್ದಾರೆ. ಅಂಕೋಲಾ ತಾಲ್ಲೂಕು ಭಾವಿಕೇರಿಯ ಅವರು, ಅಂಕೋಲಾ ವಿಧಾನಸಭಾ ಕ್ಷೇತ್ರದಿಂದ (1989–94) ಒಂದು ಅವಧಿಗೆ ಶಾಸಕರಾಗಿದ್ದರು. ಲೋಕ ಶಿಕ್ಷಣ ಟ್ರಸ್ಟ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅವರು, ಹಾಲಿ ಟ್ರಸ್ಟಿಯಾಗಿದ್ದರು. ಯಲ್ಲಾಪುರ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ, ಶಿರಸಿಯ ಜನಶಕ್ತಿ ವಿಶ್ವಸ್ಥ ಮಂಡಳಿಯ
ಗೌರವಾಧ್ಯಕ್ಷರಾಗಿದ್ದರು.

Post Comments (+)