4

ಕದಂಬ ವೃಕ್ಷಗಳ ನೆಲೆವೀಡಾಗಲಿ ಬನವಾಸಿ: ಅನಂತಕುಮಾರ ಹೆಗಡೆ

Published:
Updated:

ಶಿರಸಿ: ತಾಲ್ಲೂಕಿನ ಬನವಾಸಿಯಲ್ಲಿ ಉದ್ದೇಶಿತ ಕದಂಬ ವನದಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಕದಂಬ ಸಸಿ ನಾಟಿ ಮಾಡಿದರು. 

ಕನ್ನಡದ ಪ್ರಥಮ ರಾಜಮನೆತನದ ಹೆಸರು ಕದಂಬ. ಮಯೂರವರ್ಮನ ಮನೆಯ ಎದುರು ಕದಂಬ ವೃಕ್ಷ ಇದ್ದಕಾರಣಕ್ಕಾಗಿ ಈ ಮನೆತನಕ್ಕೆ 'ಕದಂಬ' ಹೆಸರು ಬಂತು ಎಂಬ ಪ್ರತೀತಿ ಇದೆ. ಇಂದು ಈ ಸಸ್ಯ ವಿನಾಶದ ಅಂಚಿನಲ್ಲಿರುವುದನ್ನು ಮನಗಂಡು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದಾಗ, ಎರಡು ವರ್ಷ ಶ್ರಮವಹಿಸಿ ಅವರು ಬೀಜ ಸಂಗ್ರಹಿಸಿ, ಸಸಿ ಬೆಳೆಸಿದ್ದಾರೆ ಎಂದರು.

ಬನವಾಸಿ ಮತ್ತೆ ಕದಂಬ ವೃಕ್ಷಗಳ ನೆಲೆವೀಡು ಆಗಬೇಕು. ಪ್ರವಾಸೋದ್ಯಮ ತಾಣವಾಗಿ ರೂಪಿಗೊಳ್ಳಬೇಕು ಎಂದು ಹೇಳಿದರು. 

ಜೆಡಿಎಸ್ ಮುಖಂಡ ಆನಂದ ಅಸ್ನೋಟಿಕರ್ ಮಾಡಿರುವ ಟೀಕೆ ಕುರಿತು  ಪ್ರಶ್ನಿಸಿದಾಗ, 'ನಾನು ಹೇಳಿದ್ದಷ್ಟು ಬರೆದುಕೊಳ್ಳುವುದಾದರೆ ಮಾತ್ರ ಮಾತನಾಡುತ್ತೇನೆ'  ಎಂದರು. ಕದಂಬ ವನದ ಕುರಿತು ಮಾತ್ರ ಮಾತನಾಡಿ, ಅಲ್ಲಿಂದ ಹೊರಟರು.
 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !