ಸೋಮವಾರ, ಅಕ್ಟೋಬರ್ 14, 2019
22 °C

ಭತ್ತ ಖರೀದಿ ಕೇಂದ್ರ ಪ್ರಾರಂಭಿಸುವಂತೆ ಎಪಿಎಂಸಿ ಸದಸ್ಯರ ಒತ್ತಾಯ

Published:
Updated:
Prajavani

ಶಿರಸಿ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯಾಪ್ತಿಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಕೇಂದ್ರವನ್ನು ಪುನರಾರಂಭಿಸಬೇಕು ಎಂದು ಒತ್ತಾಯಿಸಿ ಎಪಿಎಂಸಿ ಸದಸ್ಯರು ಶುಕ್ರವಾರ ಇಲ್ಲಿ ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ಅವರಿಗೆ ಮನವಿ ಸಲ್ಲಿಸಿದರು.

ವ್ಯಾಪ್ತಿಯಲ್ಲಿ ಸುಮಾರು 8205 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ದಾಸನಕೊಪ್ಪ, ಬನವಾಸಿ, ಶಿರಸಿಯಲ್ಲಿ ಭತ್ತ ಖರೀದಿ ಪ್ರಾರಂಭಿಸಿದರೆ ರೈತರಿಗೆ ಅನುಕೂಲವಾಗುತ್ತದೆ. ಈ ವರ್ಷ ಅತಿವೃಷ್ಟಿಯಿಂದ ರೈತರಿಗೆ ಹೆಚ್ಚಿನ ಹಾನಿಯಾಗಿದೆ. ಅಲ್ಲದೇ ಭತ್ತದ ಕೊಯ್ಲು ಈಗಾಗಲೇ ಪ್ರಾರಂಭಗೊಂಡಿದ್ದು, ಭತ್ತಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಸಿಗುತ್ತಿಲ್ಲ. ಯೋಗ್ಯ ಬೆಲೆ ಇಲ್ಲದೇ ರೈತರು ತೊಂದರೆಗೆ ಒಳಗಾಗಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಎಪಿಎಂಸಿ ಅಧ್ಯಕ್ಷ ಸುನೀಲ್ ನಾಯ್ಕ, ಉಪಾಧ್ಯಕ್ಷ ಕೆರಿಯಾ ಬೋರಕರ್, ನಿರ್ದೇಶಕರಾದ ಗುರುಪಾದ ಹೆಗಡೆ, ಜಿ.ಟಿ.ಹೆಗಡೆ, ಮಾರುತಿ ನಾಯ್ಕ, ವಿಶ್ವನಾಥ ಹೆಗಡೆ, ಲಕ್ಷ್ಮೀನಾರಾಯಣ ಹೆಗಡೆ, ಶಿವಕುಮಾರ ಗೌಡ, ವಿಮಲಾ ಹೆಗಡೆ, ಸವಿತಾ ಹೆಗಡೆ, ಧನಂಜಯ ಸಾಕಣ್ಣನವರ್, ಪ್ರಶಾಂತ ಗೌಡ ಇದ್ದರು.

Post Comments (+)