ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುತ್ತಿಗೆದಾರರ ಬಿಲ್ ಪಾವತಿಗೆ ಒತ್ತಾಯ

Last Updated 17 ಅಕ್ಟೋಬರ್ 2019, 11:59 IST
ಅಕ್ಷರ ಗಾತ್ರ

ಶಿರಸಿ: ವಿವಿಧ ಇಲಾಖೆಗಳ ಕಾಮಗಾರಿ ನಡೆಸಿರುವ ಗುತ್ತಿಗೆದಾರರಿಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯಿಂದ ಬರುವ ಬಿಲ್‌ನ ಕೋಟ್ಯಂತರ ರೂಪಾಯಿ ಪಾವತಿ ಎರಡು ವರ್ಷಗಳಿಂದ ಬಾಕಿ ಇದೆ. ಇದನ್ನು ತಕ್ಷಣ ಬಿಡುಗಡೆ ಮಾಡಿಸಲು ಕ್ರಮವಹಿಸಬೇಕು ಎಂದು ಒತ್ತಾಯಿಸಿ, ಸಿವಿಲ್ ಗುತ್ತಿಗೆದಾರರ ತಾಲ್ಲೂಕು ಘಟಕದ ಸದಸ್ಯರು ಗುರುವಾರ ಇಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಸಲ್ಲಿಸಿದರು.

ಪಂಚಾಯತ್‌ರಾಜ್ ಇಲಾಖೆ ಶಿರಸಿ ವಿಭಾಗದಡಿಯಲ್ಲಿ 2017-18 ಮತ್ತು 2018-19ನೇ ಸಾಲಿನ 3054 ನಿರ್ವಹಣೆ, ಗ್ರಾಮ ವಿಕಾಸ ಹಾಗೂ 5054 ಲೆಕ್ಕಶೀರ್ಷಿಕೆಯಲ್ಲಿ ಗುತ್ತಿಗೆದಾರರು ಕಾಮಗಾರಿಯನ್ನು ನಿರ್ವಹಿಸಿ ಈಗಾಗಲೇ ಎರಡು ವರ್ಷ ಕಳೆದಿದ್ದು ಗುತ್ತಿಗೆ ಬಿಲ್ ಸಂದಾಯವಾಗಿಲ್ಲ. ಅದೇ ರೀತಿ ಲೋಕೋಪಯೋಗಿ ಇಲಾಖೆ ಶಿರಸಿ ವಿಭಾಗದಲ್ಲಿ ಕೈಗೊಂಡ 5054 ನಾನ್ ಬಜೆಟ್ ಯೋಜನೆಯಡಿಯಲ್ಲಿ ಗುತ್ತಿಗೆದಾರರಿಗೆ ಸಂದಾಯವಾಗಬೇಕಾಗಿದ್ದ ಬಿಲ್‌ ಮೊತ್ತ ಬಾಕಿಯಿದೆ. ಇದರಿಂದ ಗುತ್ತಿಗೆದಾರರು ಆರ್ಥಿಕವಾಗಿ ತೊಂದರೆಗೊಳಗಾಗಿದ್ದಾರೆ. ಬ್ಯಾಂಕ್‌ಗಳಿಂದ ಪಡೆದ ಸಾಲದ ಬಡ್ಡಿಯನ್ನು ತೀರಿಸಲು ಸಹ ಕಷ್ಟಕರವಾಗುತ್ತಿದೆ. ಇದರಿಂದ ಬಾಕಿಯಿರುವ ಕಾಮಗಾರಿ ಹಾಗೂ ಸರ್ಕಾರದ ವತಿಯಿಂದ ಇನ್ನು ಮುಂದೆ ಬರುವ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸಲು ಆಗುತ್ತಿಲ್ಲ. ಆದಷ್ಟು ಶೀಘ್ರ ಹಣ ಬಿಡುಗಡೆ ಮಾಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ತಾಲ್ಲೂಕು ಅಧ್ಯಕ್ಷ ಈರಪ್ಪ ನಾಯ್ಕ, ಉಪಾಧ್ಯಕ್ಷ ಪಾಂಡುರಂಗ ನಾಯ್ಕ, ಕಾರ್ಯದರ್ಶಿ ತಬರೇಜ್ ಶೇಖ್, ಖಜಾಂಚಿ ಸಂತೋಷ ನಾಯ್ಕ, ಗುತ್ತಿಗೆದಾರರಾದ ಅನಂತ ನಾಯ್ಕ, ಖಂಡಪ್ಪ ಗೌಳಿ,ರಮೇಶ ನಾಯ್ಕ, ಸಂಜೀವ ಶೆಟ್ಟಿ, ಪುತ್ತು ಮೇಸ್ತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT