ಎತ್ತಿಗೆ ನಾಯಿ ಕಡಿತ; ಮನೆ - ಮಂದಿಗೆಲ್ಲ ಚಿಕಿತ್ಸೆ!

ಶನಿವಾರ, ಮಾರ್ಚ್ 23, 2019
31 °C

ಎತ್ತಿಗೆ ನಾಯಿ ಕಡಿತ; ಮನೆ - ಮಂದಿಗೆಲ್ಲ ಚಿಕಿತ್ಸೆ!

Published:
Updated:
Prajavani

ಮುಂಡಗೋಡ: ನಾಯಿ ಕಡಿತಕ್ಕೆ ಒಳಗಾದ ಎತ್ತಿನ ದೆಸೆಯಿಂದ ಅದನ್ನು ಸಾಕಿದ ಮನೆ ಮಂದಿ ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ! ಮೇವು ತಿನ್ನದೇ, ನೀರು ಕುಡಿಯದೇ ಎತ್ತು ಎದುರಿಗೆ ಬಂದವರಿಗೆಲ್ಲ ಹಾಯಲು ಯತ್ನಿಸುತ್ತಿದೆ. ಅದನ್ನು ನಾಲ್ಕೈದು ಹಗ್ಗಗಳಿಂದ ಗದ್ದೆಯಲ್ಲಿ ಕಟ್ಟಿಹಾಕಲಾಗಿದೆ.

ತಾಲ್ಲೂಕಿನ ಕೊಪ್ಪ ಗ್ರಾಮದ ಶಿವಾಜಿ ಮಹಾದೇವಪ್ಪ ಸುಣಗಾರ(ಸೈಕಲ್‌) ಎಂಬುವರಿಗೆ ಸೇರಿದ ಎತ್ತಿಗೆ ಕೆಲವು ದಿನಗಳ ಹಿಂದೆ ನಾಯಿಯೊಂದು ಕಚ್ಚಿತ್ತು ಎನ್ನಲಾಗಿದೆ. ಅದಕ್ಕಾಗಿ ಎತ್ತಿಗೆ ಪಶುವೈದ್ಯರಿಂದ ಒಂದು ಇಂಜೆಕ್ಷನ್ ಮಾಡಿಸಿದ್ದರು. ಆದರೆ ಎರಡು ದಿನಗಳ ಹಿಂದೆ ಎತ್ತು ಏಕಾಎಕಿ ಕೋಳಿ, ನಾಯಿ ಮತ್ತು ಜನರಿಗೆ ಹಾಯಲು ಯತ್ನಿಸಿದೆ. ಇದರಿಂದ ಆತಂಕಗೊಂಡ ಮನೆಯವರು ದನವನ್ನು ಹಿಡಿಯಲು ಮುಂದಾದಾಗ ಅವರಿಗೂ ಇರಿಯಲು ಮುಂದಾಗಿದೆ. ಪಶುವೈದ್ಯರು ಪರೀಕ್ಷಿಸಿದಾಗ ಹುಚ್ಚು ಹಿಡಿದಿರುವುದು ಗೊತ್ತಾಗಿದೆ. ನಾಲ್ಕೈದು ಹಗ್ಗಗಳಿಂದ ಹರಸಾಹಸಪಟ್ಟು ಗದ್ದೆಯಲ್ಲಿ ಕಟ್ಟಿ ಹಾಕಿದ್ದಾರೆ.

ಮನೆ ಮಂದಿಗೆ ಚಿಕಿತ್ಸೆ: ಹುಚ್ಚು ಹಿಡಿದಿರುವ ಎತ್ತಿನ ಜೊಲ್ಲು ಮನುಷ್ಯರ ಗಾಯಕ್ಕೆ ತಾಗಿದರೆ ಕೆಟ್ಟಪರಿಣಾಮ ಆಗುವ ಸಾಧ್ಯತೆ ಇದೆ. ಇದರಿಂದ ಮನೆಯಲ್ಲಿದ್ದ ಹತ್ತು ಜನರು ಸಹ ಇಂಜೆಕ್ಷನ್‌ ಪಡೆದಿದ್ದಾರೆ. ಅಲ್ಲದೇ ಮನೆಯಲ್ಲಿ ಸಾಕಿರುವ ಉಳಿದ ನಾಲ್ಕು ಜಾನುವಾರುಗಳಿಗೂ ಚಿಕಿತ್ಸೆ ಕೊಡಿಸಲಾಗಿದೆ.

‘ಒಂದು ಕಡೆ ₹40–₹45 ಸಾವಿರ ಬೆಲೆ ಬಾಳುವ ಎತ್ತು ಕಣ್ಮುಂದೆ ಒದ್ದಾಡುತ್ತಿದೆ. ಮತ್ತೊಂದೆಡೆ ಮನೆ ಮಂದಿ ತಲಾ ಐದು ಇಂಜೆಕ್ಷನ್‌ ಪಡೆಯಬೇಕಾಗಿದೆ’ ಎಂದು ರೈತ ಶಿವಾಜಿ ನೊಂದು ನುಡಿದರು.

‘ಎತ್ತಿಗೆ ಐದು ಇಂಜೆಕ್ಷನ್‌ ಮಾಡಿಸಬೇಕಾಗಿತ್ತು. ಆದರೆ ಅವರು ಒಂದೇ ಇಂಜೆಕ್ಷನ್ ಕೊಡಿಸಿದ್ದರು. ಈಗ ಹುಚ್ಚು ಉಲ್ಬಣಗೊಂಡು ಇನ್ನೆರಡು ದಿನದಲ್ಲಿ ಎತ್ತು ಸಾಯುವ ಸಾಧ್ಯತೆಯಿದೆ’ ಎಂದು ಪಶುವೈದ್ಯ ಡಾ.ಜಯಚಂದ್ರ ಕೆಂಪಶಿ ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 5

  Sad
 • 0

  Frustrated
 • 0

  Angry

Comments:

0 comments

Write the first review for this !