ಶನಿವಾರ, ಆಗಸ್ಟ್ 13, 2022
27 °C

ವಿಧಾನ ಪರಿಷತ್ ಸಭಾಪತಿಯಿಂದ ಕರ್ತವ್ಯ ಲೋಪ: ಶಿವರಾಮ್‌ ಹೆಬ್ಬಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ವಿಧಾನ ಪರಿಷತ್ ಸಭಾಪತಿ ಅವರೇ ಕರ್ತವ್ಯ ಲೋಪ ಎಸಗಿದ್ದಾರೆ. ಅವಿಶ್ವಾಸ ಇದ್ದಾಗಲೂ ಆ ಸ್ಥಾನದಲ್ಲಿ ಮುಂದುವರೆಯುವ ಮೂಲಕ ನಿಯಮ ಮುರಿದಿದ್ದಾರೆ ಎಂದು ಕಾರ್ಮಿಕ ಮತ್ತು ಸಕ್ಕರೆ ಖಾತೆ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.

ವಿಧಾನ ಪರಿಷತ್ ಕಾರ್ಯದರ್ಶಿಗೆ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಶೋಕಾಸ್ ನೋಟೀಸ್ ನೀಡಿರುವದಕ್ಕೆ ಪ್ರತಿಕ್ರಿಯಿಸಿದ ಅವರು 'ಮೊದಲು ಸದನದ ನಿಯಮ ಉಲ್ಲಂಘಿಸಿದ ಪ್ರತಾಪ್ ಚಂದ್ರ ಮೇಲೆ ಕ್ರಮವಾಗಬೇಕು. ಕಾರ್ಯದರ್ಶಿ ಮೇಲಲ್ಲ' ಎಂದರು. 

'ಪರಿಷತ್ ನಲ್ಲಿ ನಡೆದ ಘಟನೆ ಕಾಂಗ್ರೆಸ್ ನ ಹತಾಶ ಮನಸ್ಥಿತಿ ವ್ಯಕ್ತಪಡಿಸಿದೆ. ಬಹುಮತ ಇಲ್ಲದಿದ್ದರೂ ಹುದ್ದೆಯಲ್ಲಿ ಮುಂದುವರೆಯುವ ಆಸೆ ಅವರಿಗೆ ಇನ್ನೂ ಬಿಟ್ಟಿಲ್ಲ' ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು