ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಿಂಡಿ ಅಣೆಕಟ್ಟೆ: ಗೊಂದಲ ನಿವಾರಿಸಿ’

ಜ.5ರೊಳಗೆ ಸಭೆ ನಡೆಸದಿದ್ದರೆ ವಾಹನ ಸಂಚಾರ ತಡೆಯುವ ಎಚ್ಚರಿಕೆ
Last Updated 30 ಡಿಸೆಂಬರ್ 2019, 14:52 IST
ಅಕ್ಷರ ಗಾತ್ರ

ಕಾರವಾರ: ‘ಅಂಕೋಲಾ ತಾಲ್ಲೂಕಿನ ಹೊನ್ನಳ್ಳಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಿಂಡಿ ಅಣೆಕಟ್ಟಿನ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಬೇಕು. ಈ ಸಂಬಂಧ ಜ.5ರ ಒಳಗೆ ಅಗಸೂರು ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಸಭೆ ನಡೆಸಬೇಕು’ ಎಂದು ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಕೋರಿದ್ದಾರೆ.

ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಯಶವಂತ ಟಿ.ಗೌಡ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಸೋಮವಾರ ಭೇಟಿ ನೀಡಿದ ಗ್ರಾಮಸ್ಥರು ಮನವಿ ಸಲ್ಲಿಸಿದರು.

‘ಒಂದುವೇಳೆಯೋಜನೆಯ ಬಗ್ಗೆಮಾಹಿತಿ ನೀಡದಿದ್ದರೆಜ.7ರಂದು ಬೆಳಿಗ್ಗೆ11ಕ್ಕೆಹೊನ್ನಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ವಾಹನ ಸಂಚಾರ ತಡೆದು ಪ್ರತಿಭಟಿಸಲಾಗುವುದು. ಇದರಲ್ಲಿಅಗಸೂರು, ಹಿಲ್ಲೂರು, ಅಚವೆ, ಸುಂಕಸಾಳ ಹಾಗೂ ಡೊಂಗ್ರಿ ಗ್ರಾಮ ಪಂಚಾಯ್ತಿ ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ’ ಎಂದುಎಚ್ಚರಿಕೆ ನೀಡಿದರು.

‘ಕುಡಿಯುವ ನೀರು ಸಂಗ್ರಹಿಸಲುಗಂಗಾವಳಿ ನದಿಗೆ ಹೊನ್ನಳ್ಳಿ ಸಮೀಪ ಕಿಂಡಿ ಅಣೆಕಟ್ಟೆ ನಿರ್ಮಿಸುವ ಮಾಹಿತಿಯಿದೆ. ಆದರೆ, ಅದರ ವಿಸ್ತಾರ, ಯೋಜನಾ ಪ್ರದೇಶವು ನಿಖರವಾಗಿ ಎಲ್ಲಿದೆ, ಎಷ್ಟು ಹೆಕ್ಟೇರ್ ಜಮೀನು ಮುಳುಗಡೆಯಾಗುತ್ತದೆ ಎಂಬ ಮಾಹಿತಿಯನ್ನು ನೀಡಿಲ್ಲ’ ಎಂದು ದೂರಿದರು.

‘ಆಗಸ್ಟ್‌ನಲ್ಲಿ ಸುರಿದ ಮಳೆಯಿಂದ ಅಣೆಕಟ್ಟೆ ಇಲ್ಲದೆಯೂಗಂಗಾವಳಿ ನದಿಯು ಉಕ್ಕಿ ಹರಿದಿತ್ತು. ಹತ್ತಾರು ಗ್ರಾಮಗಳು ಮುಳುಗಿ ಸಾಕಷ್ಟು ಹಾನಿಯಾಗಿತ್ತು. ಸಮೀಪದಲ್ಲೇ ಇರುವಅಂಕೋಲಾ– ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯ ಮೇಲೆ ಆರು ಅಡಿಗಳಿಗೂ ಹೆಚ್ಚು ನೀರು ನಿಂತಿತ್ತು. ಹಾಗಾಗಿ ಈ ಯೋಜನೆಯ ಬಗ್ಗೆ ಸ್ಥಳೀಯರಿಗೆ ಆತಂಕವಿದೆ. ಇದನ್ನು ನಿವಾರಿಸಲು ಅಧಿಕಾರಿಗಳು ಗ್ರಾಮಸ್ಥರೊಂದಿಗೆ ಸಭೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಕೇಶವ ಗಣಪತಿ ಗೌಡ, ಬಾಬು ತಿಮ್ಮ ಗೌಡ, ಶ್ರೀನಿವಾಸ ಎಸ್.ಶೆಟ್ಟಿ, ದೊಳ್ಳಾ ಬೈರು ಗೌಡ, ರುಕ್ಕು ಕುಸ್ಲು ಗೌಡ, ತಿಮ್ಮಪ್ಪ ನಾರಾಯಣ ಗೌಡ, ಬುದ್ಧು ವಾಸು ಗೌಡ, ಹಾಲಪ್ಪ ಲೋಕು ಗೌಡ, ನಾಗಪ್ಪ ಓಮು ಹರಿಕಾಂತ, ಹೊನ್ನಪ್ಪ ಹನುಮ ಗೌಡ, ಈಶ್ವರ ತಿಮ್ಮ ಗೌಡ, ಹನುಮಂತ ಹೊನ್ನಪ್ಪ ಗೌಡಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT