ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿಯಲ್ಲಿ ನಾಲ್ಕು ಆಕಳುಗಳ ಸಾವು: ವೈರಸ್‌ ಶಂಕೆ

Last Updated 12 ಮಾರ್ಚ್ 2020, 2:09 IST
ಅಕ್ಷರ ಗಾತ್ರ

ಶಿರಸಿ: ಕಳೆದ ಒಂದು ವಾರದಲ್ಲಿ ಇಲ್ಲಿನ ಕೆಎಚ್‌ಬಿ ಕಾಲೊನಿಯಲ್ಲಿ ನಾಲ್ಕು ಆಕಳುಗಳು ನಿಗೂಢವಾಗಿ ಸಾವು ಕಂಡಿವೆ. ಬುಧವಾರ ಬೆಳಿಗ್ಗೆ ಇನ್ನೊಂದು ಆಕಳು ಅಸ್ವಸ್ಥಗೊಂಡಿದೆ. ಪಶುವೈದ್ಯರು ಚಿಕಿತ್ಸೆ ನೀಡಿದ್ದಾರೆ.

ಆಕಳುಗಳ ಸಾವಿಗೆ ನಿಖರ ಕಾರಣ ಇನ್ನಷ್ಟೇ ಗೊತ್ತಾಗಬೇಕಾಗಿದೆ. ಯಾವುದಾದರೂ ವೈರಸ್ ಕಾಯಿಲೆ ಇರಬಹದೆಂದು ಕೆಲವರು ಶಂಕೆ ವ್ಯಕ್ತಪಡಿಸಿದರೆ, ಇನ್ನು ಕೆಲವರು ಹಳಸಿದ ಆಹಾರ ಸೇವನೆಯಿಂದ ಮೃತಪಟ್ಟಿರಬಹುದೆಂದು ಸಂದೇಹ ವ್ಯಕ್ತಪಡಿಸಿದ್ದಾರೆ.

‘ಆಹಾರ ದೋಷದಿಂದ ಆಕಳು ಅನಾರೋಗ್ಯಕ್ಕೆ ತುತ್ತಾಗಿದೆ. ಹಿಂದೆ ಸತ್ತಿರುವ ಆಕಳುಗಳ ಬಗ್ಗೆ ಮಾಹಿತಿಯಿಲ್ಲ’ ಎಂದು ಡಾ.ಆರ್.ಜಿ.ಹೆಗಡೆ ಹೇಳಿದರು.

‘ಆಕಳುಗಳ ಸಾವಿನ ಕಾರಣ ಗೊತ್ತಾಗಬೇಕು. ಇದರಿಂದ ಜನರ ಆತಂಕವೂ ದೂರವಾಗಬೇಕು’ ಎಂದು ನಗರಸಭೆ ಸದಸ್ಯ ಶ್ರೀಕಾಂತ ಬಳ್ಳಾರಿ ವೈದ್ಯಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT