ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೂರು ಗ್ರಾಮಗಳಿಗೆ ನೀರಿನ ವ್ಯವಸ್ಥೆ ಮಾಡಿ’

ಮರಾಕಲ್ ಯೋಜನೆ: ಒಪ್ಪಂದದಲ್ಲಿ ವ್ಯತ್ಯಾಸವಾದರೆ ಕಾನೂನು ಹೋರಾಟ
Last Updated 29 ಮೇ 2019, 15:24 IST
ಅಕ್ಷರ ಗಾತ್ರ

ಅಂಕೋಲಾ:‘ತಾಲ್ಲೂಕಿನ ಮೊಗಟಾ, ಸಗಡಗೇರಿ ಮತ್ತು ಅಗ್ರಗೋಣ ಗ್ರಾಮ ಪಂಚಾಯ್ತಿಗಳ ಎಲ್ಲ ಮಜರೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ನಂತರವೇಕುಮಟಾ ತಾಲ್ಲೂಕಿನ ನೀರಿನ ಯೋಜನೆಯ ಪೈಪ್‌ಲೈನ್ ಅಳವಡಿಸಲು ಮುಂದಾಗಬೇಕು’ ಎಂದು ಮರಾಕಲ್ ಕುಡಿಯುವ ನೀರು ಹೋರಾಟ ಸಮಿತಿಯ ಅಧ್ಯಕ್ಷ ಶಿವರಾಂ ಗಾಂವಕರಆಗ್ರಹಿಸಿದರು.

ಸಮಿತಿಯು ಮೋರಳ್ಳಿಯಲ್ಲಿ ಬುಧವಾರ ಹಮ್ಮಿಕೊಂಡ‘ಜನಸ್ಪಂದನಾ ಸಭೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಗಂಗಾವಳಿ ನದಿ ಕುಡಿಯುವ ನೀರಿಗಾಗಿನಾವು ನಡೆಸಿದ ಹೋರಾಟಕ್ಕೆ ಫಲ ದೊರೆತಿದೆ. ಆದರೂ ಮೊಗಟಾ, ಸಗಡಗೇರಿ ಮತ್ತು ಅಗ್ರಗೋಣ ಗ್ರಾಮಗಳ ಎಲ್ಲಾ ಮಜರೆಗಳಿಗೆ ನೀರು ನೀಡುವ ಕುರಿತು ಜಿಲ್ಲಾ ಪಂಚಾಯ್ತಿಯಿಂದ ಒಪ್ಪಿಗೆ ಪತ್ರ ನೀಡಲು ಕೇಳಲಾಗಿದೆ. ಆ ಪತ್ರಕ್ಕೆಜನರ ಸಮ್ಮುಖದಲ್ಲೇಎಲ್ಲರ ಅನುಮೋದನೆ ಪಡೆಯಬೇಕು.ಅದರಲ್ಲಿ ನಮ್ಮ ಬೇಡಿಕೆಗಳನ್ನು ಬರೆದು ನೀಡಬೇಕು’ ಎಂದು ಹೇಳಿದರು.

‘ಮೊದಲು ಮೂರು ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಮನೆ ಮನೆಗೆ ಪೈಪ್‌ಲೈನ್ ಅಳವಡಿಸಬೇಕು. ಅಲ್ಲದೇ ವರ್ಷಪೂರ್ತಿ ನೀರು ಕೊಡಬೇಕು.ಏಪ್ರಿಲ್, ಮೇ ತಿಂಗಳಿನಲ್ಲಿ ನೀರಿನ ಸಮಸ್ಯೆ ಉದ್ಭವಿಸಿದಾಗ ಸರಿಯಾದ ಪ್ರಮಾಣದಲ್ಲಿ ಎಲ್ಲರಿಗೂ ನೀರನ್ನು ನೀಡಬೇಕು. ಗಂಗಾವಳಿ ಭಾಗದ ರೈತರಿಗೆ ಯಾವುದೇ ತೊಂದರೆಯಾಗಬಾರದು. ಅಲ್ಲದೇತಾಲ್ಲೂಕಿನ ಅಗತ್ಯವಿರುವಎಲ್ಲ ಭಾಗಗಳಿಗೆ ನೀರುನೀಡುವ ಯೋಜನೆಯನ್ನು ರೂಪಿಸಬೇಕು. ನಮ್ಮ ಒಪ್ಪಂದಗಳಲ್ಲಿ ಯಾವುದೇ ವ್ಯತ್ಯಾಸವಾದರೂ ಕಾನೂನಾತ್ಮಕ ಹೋರಾಟಕ್ಕೆ ಸಿದ್ಧರಿದ್ದೇವೆ’ಎಂದು ಎಚ್ಚರಿಕೆ ನೀಡಿದರು.

ವಕೀಲನಾಗರಾಜ ನಾಯಕ, ನಿತ್ಯಾನಂದ ಗಾಂವ್ಕರ್, ಚಿಕ್ಕ ನೀರಾವರಿ ಇಲಾಖೆಯ ಎಂಜಿನಿಯರ್ ಬಾಲಚಂದ್ರ, ಮಹಮ್ಮದ್ ಡಾಂಗಿ, ಪ್ರದೀಪ ನಾಯಕ ಮತ್ತು ನೂರಾರು ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT