ಅಪರೂಪದ ಬಿಳಿ ಗೂಬೆ ಮರಿ ಪತ್ತೆ

7

ಅಪರೂಪದ ಬಿಳಿ ಗೂಬೆ ಮರಿ ಪತ್ತೆ

Published:
Updated:
Deccan Herald

ಕಾರವಾರ: ಅಪರೂಪದ ಬಿಳಿ ಗೂಬೆಯ ಮರಿಯೊಂದು ನಗರದ ಸೇಂಟ್ ಮೈಕೆಲ್ ಕಾನ್ವೆಂಟ್ ಬಳಿ ಶುಕ್ರವಾರ ಕಾಣಿಸಿಕೊಂಡಿತು.

ಇದನ್ನು ನೋಡಿದ ಜನರು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಅದರ ಫೊಟೊವನ್ನು ಸೆರೆ ಹಿಡಿದುಕೊಂಡರು. ಶಾಲೆಯ ಪ್ರವೇಶ ದ್ವಾರದ ಬಳಿ ಇದ್ದ ಅದನ್ನು ಹಿಡಿದ ಶಾಲೆಯ ಸಿಬ್ಬಂದಿ ಪಂಜರಕ್ಕೆ ಸೇರಿಸಿ ರಕ್ಷಣೆ ಮಾಡಿದರು.

ನಂತರ ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಸಿಬ್ಬಂದಿ ಮೋಹನ ನಾಯ್ಕ ಹಾಗೂ ಪಕ್ಷಿತಜ್ಞ ಗೋಪಾಲ ನಾಯ್ಕ, ಅದನ್ನು ಮೊದಲಿದ್ದ ಜಾಗಕ್ಕೆ ತಂದು ಬಿಟ್ಟರು. ‘ರಾತ್ರಿಯ ವೇಳೆಯಲ್ಲಿ ಇವುಗಳು ಹೆಚ್ಚು ಚುರುಕಾಗಿರುತ್ತವೆ. ಅದರ ತಾಯಿ ರಾತ್ರಿ ಬರಬಹುದು. ಹೀಗಾಗಿ ಮರಿಯು ಇದ್ದ ಜಾಗದಲ್ಲೇ ಇದ್ದರೆ ಅದನ್ನು ಕರೆದುಕೊಂಡು ಹೋಗಬಹುದು’ ಎಂದು ಅವರು ತಿಳಿಸಿದರು.

‘ಸುಮಾರು ಒಂದು ವಾರದ ಮರಿ ಇದಾಗಿದೆ. ‘ಬಾರ್ನ್ ಔಲ್’ (Barn Owl) ಎಂದು ಇದನ್ನು ಕರೆಯಲಾಗುತ್ತದೆ. ಇದು ಇಲಿ, ಏಡಿ, ಸಣ್ಣಪುಟ್ಟ ಕೀಟಗಳನ್ನು ಹಿಡಿದು ತಿನ್ನುತ್ತವೆ’ ಎಂದು ಗೋಪಾಲ್ ನಾಯ್ಕ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !