ಉತ್ತರ ಕನ್ನಡ: ಮಳೆಗಾಲದಲ್ಲಿ ಅಣಬೆಗಳ ಸಾಮ್ರಾಜ್ಯ!

ಕಾರವಾರ: ಮಳೆಗಾಲ ಶುರುವಾಗುತ್ತಿದ್ದಂತೆ ಜಿಲ್ಲೆಯ ಮಲೆನಾಡಿನಲ್ಲಿ, ಕರಾವಳಿಯ ವಿವಿಧೆಡೆ ಅಣಬೆಗಳ ಸಾಮ್ರಾಜ್ಯ ತಲೆಯೆತ್ತುತ್ತದೆ. ವಿವಿಧ ಬಣ್ಣಗಳ, ಆಕಾರಗಳ ಈ ಶಿಲೀಂಧ್ರಗಳು ಪರಿಸರ ಪ್ರಿಯರನ್ನು ಆಕರ್ಷಿಸುತ್ತವೆ.
ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಹಳೆಯ ಮರ, ಎಲೆಗಳ ಮೇಲೆ ಬೆಳೆಯುವ ಕಾಡು ಅಣಬೆಗಳಲ್ಲಿ ನೂರಾರು ಪ್ರಭೇದಗಳಿವೆ. ಅವುಗಳಲ್ಲಿ ಕೆಲವನ್ನು ಆಹಾರವಾಗಿಯೂ ಬಳಕೆ ಮಾಡಲಾಗುತ್ತದೆ. ಅವುಗಳ ರುಚಿಯನ್ನು ಬಲ್ಲವರು, ಪ್ರತಿ ಮಳೆಗಾಲದಲ್ಲಿ ಒಮ್ಮೆಯಾದರೂ ಹುಡುಕಿ ತಂದು ಪದಾರ್ಥ ಮಾಡಿ ಬಾಯಿ ಚಪ್ಪರಿಸುತ್ತಾರೆ.

ಕೆಲವು ಅಣಬೆಗಳು ಆಕರ್ಷಕವಾಗಿ ಕಂಡರೂ ಅತ್ಯಂತ ವಿಷಯುಕ್ತವಾಗಿಯೂ ಇರುತ್ತವೆ. ಮನುಷ್ಯನ ದೇಹಪ್ರಕೃತಿಗೆ ಒಗ್ಗದೇ ಜೀವಕ್ಕೇ ಅಪಾಯ ಬಂದ ಉದಾಹರಣೆಗಳೂ ಇವೆ. ಹಾಗಾಗಿ, ಕಾಡು ಅಣಬೆಗಳನ್ನು ಆಹಾರವಾಗಿ ಆಯ್ಕೆ ಮಾಡಿಕೊಳ್ಳಲು ಅನುಭವದ ಅಗತ್ಯವಿದೆ. ಇಲ್ಲದಿದ್ದರೆ ತೊಂದರೆಯಾಗುವ ಸಾಧ್ಯತೆಯಿರುತ್ತದೆ.
ಮಳೆಗಾಲ ಅರಳುವ ಕೆಲವು ಪ್ರಜಾತಿಯ ಅಣಬೆಗಳು, ಕೆಲವೇ ದಿನಗಳಲ್ಲಿ ನಶಿಸಿ ಹೋಗುತ್ತವೆ. ಆದರೆ, ಕೆಲವು ತಿಂಗಳುಗಟ್ಟಲೆ ಉಳಿದು, ಬಿಸಿಲಿಗೆ ಒಣಗಿ ಆಕರ್ಷಕ ಗೃಹಾಲಂಕಾರ ಪರಿಕರವಾಗಿಯೂ ಬಳಕೆಯಾಗುತ್ತವೆ. ಹೀಗೆ ಪ್ರಕೃತಿಯ ವಿವಿಧ ಅದ್ಭುತಗಳಲ್ಲಿ ಒಂದಾಗಿರುವ ಅಣಬೆಗಳು ಮಳೆಗಾಲದ ಸೊಬಗನ್ನು ಮತ್ತಷ್ಟು ರಂಗೇರಿಸುತ್ತವೆ.




ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.