ಗುರುವಾರ , ಡಿಸೆಂಬರ್ 12, 2019
27 °C
ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ದಂಪತಿಗೆ ಸನ್ಮಾನ

‘ಸಂಸ್ಕೃತಿ ಸಂರಕ್ಷಣೆಗೆ ಗ್ರಾಮೀಣ ಕೊಡುಗೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಶಿರಸಿ: ಕೆರೆ ಹೂಳೆತ್ತುವಲ್ಲಿ ವಿಶೇಷ ಸಾಧನೆ ಮಾಡಿರುವ ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ದಂಪತಿಯನ್ನು ಗುರುವಾರ ಸನ್ಮಾನಿಸಲಾಯಿತು.

ಶ್ರೀಪಾದರಾವ್ ಕಲ್ಗುಂಡಿಕೊಪ್ಪ ಫೌಂಡೇಷನ್ ಆಶ್ರಯದಲ್ಲಿ ತಾಲ್ಲೂಕಿನ ಯಡಳ್ಳಿಯಲ್ಲಿ ನಡೆದ ಯಡಳ್ಳಿ ಉತ್ಸವದಲ್ಲಿ ಎಂಇಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ ಸನ್ಮಾನಿಸಿದರು. ‘ಯುವಪೀಳಿಗೆ ಟಿ.ವಿ ಹಾಗೂ ಮೊಬೈಲ್ ಪ್ರಭಾವದಿಂದ ಪಾಶ್ಚಿಮಾತ್ಯ ಸಂಸ್ಕೃತಿಗೆ ವಾಲುತ್ತಿದೆ. ಈ ಕಾಲಘಟ್ಟದಲ್ಲಿ ಕಲೆ, ಸಂಸ್ಕೃತಿ ಉಳಿಸಲು ಗ್ರಾಮೀಣ ಭಾಗದ ಕಾರ್ಯಕ್ರಮಗಳು ಸಹಕಾರಿಯಾಗಿವೆ. ಸಮಾಜಕ್ಕೆ ಕೊಡುಗೆ ನೀಡಿದವರನ್ನು ಗುರುತಿಸುವ ಕಾರ್ಯ ಶ್ಲಾಘನೀಯ’ ಎಂದರು.

ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಚಂದ್ರು ದೇವಾಡಿಗ ಮಾತನಾಡಿ, ‘ಮನುಷ್ಯನಿಗೆ ಅತಿ ಅವಶ್ಯವಾಗಿ ಬೇಕಾಗುವ ನೀರಿನ ಬಗ್ಗೆ ಕೆಲಸ ಮಾಡಿರುವ ಹೆಬ್ಬಾರ ಅವರನ್ನು ಸನ್ಮಾನಿಸಿದ್ದು ಸ್ತುತ್ಯಾರ್ಹ’ ಎಂದರು. ‘ಮನುಷ್ಯನಿಗೆ ಸಮಾಜದ ಪ್ರೋತ್ಸಾಹ ಸಿಕ್ಕಿದಾಗ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಸಮಾಜಕ್ಕೆ ಕೊಡುಗೆ ನೀಡಿದರೆ ಜೀವನ ಸಾರ್ಥಕವೆನಿಸುತ್ತದೆ’ ಎಂದು ಶ್ರೀನಿವಾಸ ಹೆಬ್ಬಾರ ಹೇಳಿದರು.

ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ಅಂಜನಾ ಭಟ್ಟ, ರಕ್ತದಾನಿ ನೇತ್ರಾವತಿ ಹಳೆಮನೆ, ಕಾನಗೋಡ ಸೊಸೈಟಿ ನಿರ್ದೇಶಕ ಮಂಜುನಾಥ ಹೆಗಡೆ, ತಬಲಾ ವಾದಕ ಲಕ್ಷ್ಮೀಶರಾವ್ ಕಲ್ಗುಂಡಿಕೊಪ್ಪ ಇದ್ದರು. ಯಡಳ್ಳಿ ಮಾಧ್ಯಮಿಕ ಶಿಕ್ಷಣ ಪ್ರಸಾರಕ ಸಮಿತಿ ಗೌರವ ಕಾರ್ಯದರ್ಶಿ ಎಂ.ವಿ.ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಬಾಲನಟ ಸಮರ್ಥ ಹೆಗಡೆ ವಾನಳ್ಳಿ ಅವರನ್ನು ಸನ್ಮಾನಿಸಲಾಯಿತು. ಮಹೇಶ ಭಟ್ಟ ಸ್ವಾಗತಿಸಿದರು. ಗಿರಿಧರ ಕಬ್ನಳ್ಳಿ ನಿರೂಪಿಸಿದರು. ರಾಘವೇಂದ್ರ ಬೆಟ್ಟಕೊಪ್ಪ ವಂದಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು