ಬುಧವಾರ, ಸೆಪ್ಟೆಂಬರ್ 18, 2019
26 °C

ಯಕ್ಷೋತ್ಸವದಲ್ಲಿ ಯಕ್ಷಗಾನ ಬ್ಯಾಲೆ ಪ್ರದರ್ಶನ

Published:
Updated:
Prajavani

ಶಿರಸಿ: ತಾಲ್ಲೂಕಿನ ಸ್ವರ್ಣವಲ್ಲಿಯಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಯಕ್ಷೋತ್ಸವದಲ್ಲಿ ಡಾ. ಶಿವರಾಮ ಕಾರಂತ ರಚನೆಯ ಯಕ್ಷಗಾನ ಬ್ಯಾಲೆ ಗಮನ ಸೆಳೆಯಿತು.

ಬೆಂಗಳೂರಿನ ಕರ್ನಾಟಕ ಕಲಾದರ್ಶಿನಿ ತಂಡದವರು ‘ಚಿತ್ರಾಂಗದಾ’ ಯಕ್ಷಗಾನ ಬ್ಯಾಲೆ ಎನ್ನುವ ವಿನೂತನ ಯಕ್ಷಗಾನ ಪ್ರಯೋಗವನ್ನು ವಿದ್ವಾನ್ ಸುಧೀರರಾವ್ ಕೊಡವೂರು ಅವರ ಮರುನಿರ್ದೇಶನದಲ್ಲಿ ವಿನೂತನವಾಗಿ ಪ್ರದರ್ಶಿಸಿದರು.

ಬಡಗುತಿಟ್ಟಿನ ಪ್ರಸಿದ್ದ ಕಲಾವಿದರಿಂದ ‘ಜ್ವಾಲಾ ಪ್ರತಾಪ’ ಪ್ರದರ್ಶನಗೊಂಡಿತು. ಹಿಮ್ಮೇಳದಲ್ಲಿ ಭಾಗವತರಾಗಿ ಕೇಶವ ಹೆಗಡೆ ಕೊಳಗಿ, ಮದ್ದಲೆ ವಾದಕರಾಗಿ ನರಸಿಂಹ ಭಟ್ಟ ಹಂಡರಮನೆ, ಚಂಡೆ ವಾದಕರಾಗಿ ವಿಘ್ನೇಶ್ವರ ಕೆಸರಕೊಪ್ಪ ಭಾಗವಹಿಸಿದ್ದರು. ಪಾತ್ರಧಾರಿಗಳಾಗಿ ಶ್ರೀಪಾದ ಭಟ್ಟ ತಂಡೀಮನೆ, ಶಂಕರ ಹೆಗಡೆ ನೀಲ್ಕೋಡ, ಚಂದ್ರಹಾಸ ಹೊಸಪಟ್ಟಣ, ಶ್ರೀಧರ ಹೆಗಡೆ ಚಪ್ಪರಮನೆ, ಸದಾಶಿವ ಮಲವಳ್ಳಿ, ಗಣಪತಿ ಭಟ್ಟ ಮುದ್ದಿನಪಾಲ್ ಭಾಗವಹಿಸಿದ್ದರು.

ಎರಡನೇ ದಿನ ಭಾರತಿ ಕಲಾ ಪ್ರತಿಷ್ಠಾನ ಹೊಸೂರು ಸಾಗರ ಅವರ ಗುರುನಂದನ ಹೊಸೂರು ನಿರ್ದೇಶನದಲ್ಲಿ ‘ರಾವಣವಧೆ’ ಆಖ್ಯಾನ ಪ್ರದರ್ಶನಗೊಂಡಿತು. ಜಾನ್ಮನೆಯ ಯಕ್ಷ ಸೌರಭ ಮಕ್ಕಳಿಂದ ಜಿ.ಎನ್.ಹೆಗಡೆ ಹಾವಳಿಮನೆ ಸಂಯೋಜನೆಯಲ್ಲಿ, ನರೇಂದ್ರ ಅತ್ತೀಮುರುಡು ಅವರ ನಿರ್ದೇಶನದಲ್ಲಿ ‘ಸುದರ್ಶನ ವಿಜಯ’ ಯಕ್ಷಗಾನ ಪ್ರದರ್ಶನಗೊಂಡಿತು.

 

Post Comments (+)