ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕ್ಷಗಾನ ಬಾಲ‌ ಕಲಾವಿದೆ ತುಳಸಿಗೆ ಇಂಡಿಯನ್ ಸ್ಟಾರ್ ಐಕಾನ್ ಅವಾರ್ಡ್

Last Updated 12 ಮೇ 2022, 15:26 IST
ಅಕ್ಷರ ಗಾತ್ರ

ಶಿರಸಿ: ವಿಶ್ವಶಾಂತಿ ಸರಣಿ ಯಕ್ಷನೃತ್ಯ ರೂಪಕಗಳ ಮೂಲಕ ನಾಡಿನ ಗಮನಸೆಳೆದ ಯಕ್ಷಗಾನ ಬಾಲ‌ ಕಲಾವಿದೆ, ತಾಲ್ಲೂಕಿನ ಬೆಟ್ಟಕೊಪ್ಪದ ತುಳಸಿ ಹೆಗಡೆಗೆ ಮಹಾರಾಷ್ಟ್ರದ ನ್ಯಾಶನಲ್ ಅಕಾಡೆಮಿ ಫಾರ್ ಆರ್ಟ್ ಎಜ್ಯುಕೆಶನ್ ನೀಡುವ ಇಂಡಿಯನ್ ಸ್ಟಾರ್ ಐಕಾನ್‌ ಕಿಡ್ ಅಚೀವರ್ಸ್ ಅವಾರ್ಡ್‌ ಲಭಿಸಿದೆ.

ದೇಶದ ವಿವಿಧೆಡೆಯ‌ ಮಕ್ಕಳ ಸಾಂಸ್ಕೃತಿಕ ಹಾಗೂ ಕ್ರೀಡಾ ಸಾಧನೆ ಪರಿಗಣಿಸಿ ನೀಡುವ ಪ್ರಶಸ್ತಿ ಇದಾಗಿದೆ. ತುಳಸಿ ಮೂರುವರೆ ವರ್ಷಕ್ಕೇ ಯಕ್ಷಗಾನ ವೇಷ ಧರಿಸಿ ವೇದಿಕೆಗೆ ಏರಿದ ಬಾಲಕಿ. ಕಳೆದ ಏಳು ವರ್ಷಗಳಿಂದ ಏಳು ವಿಶ್ವಶಾಂತಿ ಸರಣಿ ಯಕ್ಷನೃತ್ಯ ರೂಪಕ ಪ್ರಸ್ತುತಗೊಳಿಸಿ ಹೆಸರು ಗಳಿಸಿದ್ದು, ಇದನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಆಯ್ಕೆ ಪ್ರಕ್ರಿಯೆಯಲ್ಲಿ ನ್ಯಾಶನಲ್ ಅಕಾಡೆಮಿ ಫಾರ್ ಆರ್ಟ್ ಎಜ್ಯುಕೆಶನ್ ಜತೆಗೆ ನವಭಾರತ ರಾಷ್ಟ್ರೀಯ ಜ್ಞಾನಪೀಠ ಸಂಸ್ಥೆ, ಸುರಭೀ ಆಲ್ ಇಂಡಿಯಾ ಚೈಲ್ಡ್ ಆರ್ಟ್ ಎಕ್ಸಿಬಿಶನ್ ಸೊಸೈಟಿ, ನ್ಯಾಶನಲ್ ಎಕನಾಮಿಕ್ಸ್ ಗ್ರೋಥ್ ಟೈಮ್ಸ್ ಸಹಕಾರ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT