ದುರ್ವ್ಯಸನ ದೂರ ಮಾಡಲು ಯಕ್ಷಗಾನ ಸಹಕಾರಿ: ಸ್ವರ್ಣವಲ್ಲಿ ಶ್ರೀ ಅಭಿಮತ

7
ಯಕ್ಷೋತ್ಸವದ ಸಮಾರೋಪ ಸಮಾರಂಭ

ದುರ್ವ್ಯಸನ ದೂರ ಮಾಡಲು ಯಕ್ಷಗಾನ ಸಹಕಾರಿ: ಸ್ವರ್ಣವಲ್ಲಿ ಶ್ರೀ ಅಭಿಮತ

Published:
Updated:
Deccan Herald

ಶಿರಸಿ: ಸತ್ಪ್ರವೃತ್ತಿ ಕಲೆಯಾದ ಯಕ್ಷಗಾನವನ್ನು ಕಲಿಸುವ ಮೂಲಕ ಯುವ ಪೀಳಿಗೆಯನ್ನು ದುರ್ವ್ಯಸನದಿಂದ ದೂರವಿಡಬೇಕು ಎಂದು ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ನುಡಿದರು.

ಯಕ್ಷ ಶಾಲ್ಮಲಾ ಸಂಘಟನೆ ತಾಲ್ಲೂಕಿನ ಸ್ವರ್ಣವಲ್ಲಿ ಮಠದಲ್ಲಿ ಆಯೋಜಿಸಿದ್ದ ಮೂರು ದಿನಗಳ ಯಕ್ಷೋತ್ಸವ ಸಮಾರೋಪದಲ್ಲಿ ಸೋಮವಾರ ಅವರು ಆಶೀರ್ವಚನ ನೀಡಿದರು. ಇತ್ತೀಚಿನ ವರ್ಷಗಳಲ್ಲಿ ಯುವ ಪೀಳಿಗೆ ಮಾದಕ ವ್ಯಸನಕ್ಕೆ ಬಲಿಯಾಗುತ್ತಿದೆ. ಒಳ್ಳೆಯ ಹವ್ಯಾಸಗಳು ಇಲ್ಲದಿದ್ದರೆ ಕೆಟ್ಟ ಚಟಗಳತ್ತ ಮನಸ್ಸು ಸಾಗುತ್ತದೆ. ಈ ಹಿನ್ನೆಲೆಯಲ್ಲಿ ಉತ್ತಮ ಹವ್ಯಾಸಗಳು ಪ್ರಭಾವ ಬೀರಬೇಕು. ಯಕ್ಷಗಾನ, ತಾಳಮದ್ದಳೆ ಒಳ್ಳೆಯ ವಿಚಾರಗಳನ್ನು ವ್ಯಕ್ತಿಗೆ ನೀಡುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಶಾಲಾ ಪಠ್ಯಕ್ರಮದಲ್ಲಿ ಯಕ್ಷಗಾನ ವಿಷಯ ಅಳವಡಿಕೆ ಕುರಿತಂತೆ ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದರು.

ಯಕ್ಷಗಾನ ವಿದ್ವಾಂಸ ಆನಂದರಾಮ್ ಉಪಾಧ್ಯಾಯ ಅವರು, ‘ಯಕ್ಷಗಾನಕ್ಕೆ ಸಂವಾದಿಯಾಗಿ ದೊಡ್ಡಾಟ, ಸಣ್ಣಾಟ, ತೊಗಲು ಗೊಂಬೆಯಾಟ ಸೇರಿದಂತೆ ಹಲವು ಕಲೆಗಳಿವೆ. ಆದರೆ, ಯಕ್ಷಗಾನದ ಸರಿಸಮಕ್ಕೆ ಈ ಯಾವ ಕಲೆಯೂ ಬೆಳೆದಿಲ್ಲ. ವೃತ್ತಿನಿರತ ಕಲಾವಿದರು ಯಕ್ಷಗಾನದ ಮೂಲಸತ್ವದೆಡೆಗೆ ಗಮನ ನೀಡಬೇಕು’ ಎಂದರು. ಹಿರಿಯ ಕಲಾವಿದ ರಾಮಚಂದ್ರ ಗಾಂವಕರ ಕಲ್ಲೇಶ್ವರ ಹಾಗೂ ಹಿರಿಯ ಅರ್ಥಧಾರಿ ಡಾ.ಶಾಂತಾರಾಮ ಪ್ರಭು ಅವರಿಗೆ ‘ಯಕ್ಷ ಸ್ವರ್ಣ’ ಬಿರುದು ನೀಡಿ ಗೌರವಿಸಲಾಯಿತು.

ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ.ಹೆಗಡೆ ದಂಟ್ಕಲ್ ಮೂರು ದಿನ ನಡೆದ ಕಾರ್ಯಕ್ರಮಗಳ ವರದಿ ವಾಚಿಸಿದರು. ಆರ್.ಎಸ್.ಹೆಗಡೆ ಭೈರುಂಬೆ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !