ಉದ್ಯಮದಲ್ಲಿ ಯಶಸ್ಸು ಕಂಡ ಯುವಕ

7
ಕಾರ್ಪೊರೇಟ್ ಉದ್ಯೋಗಕ್ಕೆ ವಿದಾಯ, ಹುಟ್ಟೂರಿನ ಸೆಳೆತ

ಉದ್ಯಮದಲ್ಲಿ ಯಶಸ್ಸು ಕಂಡ ಯುವಕ

Published:
Updated:
Deccan Herald

ಶಿರಸಿ: ಎಂಜಿನಿಯರಿಂಗ್ ಮುಗಿಸಿ ಮಹಾನಗರದ ಕಾರ್ಪೊರೇಟ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಯುವಕನ ಮನಸ್ಸಿಗೆ ಮಲೆನಾಡಿನ ಮಣ್ಣಿನ ವಾಸನೆ ಆವರಿಸಿತ್ತು. ಸದಾ ವಾಹನ ದಟ್ಟಣಿಯ ಬೆಂಗಳೂರಿಗಿಂತ, ಕಾಡಿನ ಸಾಂಗತ್ಯದ ಹುಟ್ಟೂರೇ ಸುಖವೆಂದು ಕಂಡಿತು. ಉದ್ಯೋಗಕ್ಕೆ ವಿದಾಯ ಹೇಳಿ, ಉದ್ಯಮ ಆರಂಭಿಸಿರುವ ಈ ಯುವಕ ಈಗ ಯಶಸ್ವಿ ಉದ್ಯಮಿಯಾಗಿದ್ದಾರೆ.

ತಾಲ್ಲೂಕಿನ ಹುಳಗೋಳದ ಸುಮಂತ್ ಹೆಗಡೆ ಇಂಡಸ್ಟ್ರಿಯಲ್ ಪ್ರೊಡಕ್ಷನ್ ಎಂಜಿನಿಯರಿಂಗ್ ಪದವೀಧರ. ಅವರು ಹಾಗೂ ಅವರ ಸ್ನೇಹಿತ, ಎಂಬಿಎ ಪದವೀಧರ ರಾಣಿಬೆನ್ನೂರಿನ ಸಮರ್ಥ ನಾಡಿಗೇರ ಇಬ್ಬರು ಕಂಪನಿಯಲ್ಲಿ ಉದ್ಯೋಗದಲ್ಲಿದ್ದವರು. ಇಬ್ಬರೂ ಊರಿಗೆ ಬರುವ ಹಂಬಲದಿಂದ ಉದ್ಯಮ ನಡೆಸಲು ಯೋಚಿಸಿದರು. ಇದರ ಫಲವಾಗಿ ಅವರೀಗ ಇಲ್ಲಿನ ಬನವಾಸಿ ರಸ್ತೆಯಲ್ಲಿರುವ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಯುಪಿವಿಸಿ ಕಿಟಕಿ ಮತ್ತು ಬಾಗಿಲು ಸಿದ್ಧಪಡಿಸುವ ಘಟಕ ಪ್ರಾರಂಭಿಸಿದ್ದಾರೆ.

‘ಜರ್ಮನಿ ತಂತ್ರಜ್ಞಾನದ ಈ ಉತ್ಪನ್ನ ಮೊದಲು ದುಬಾರಿಯಾಗಿತ್ತು. ಶ್ರೀಮಂತರ ಮನೆಗಳಲ್ಲಷ್ಟೇ ಇದನ್ನು ಕಾಣಬಹುದಾಗಿತ್ತು. ಪ್ರಸ್ತುತ ಇದರ ಬೆಲೆ ಕಡಿಮೆಯಾಗಿದೆ. ಮಧ್ಯಮ ವರ್ಗದವರು ಸಹ ಮನೆಯ ಕಿಟಕಿ, ಬಾಗಿಲುಗಳಿಗೆ ಇದನ್ನು ಬಳಸಿ, ಹೊಸ ಮನೆಯ ಅಂದವನ್ನು ಹೆಚ್ಚಿಸಿಕೊಳ್ಳಬಹುದು. ಉಷ್ಣ ಹಾಗೂ ಶೀತ ಹವಾಮಾನವಿರುವ ದೇಶಗಳಲ್ಲೂ ಇದು ಬಳಕೆಯಾಗುತ್ತದೆ’ ಎನ್ನುತ್ತಾರೆ ಸುಮಂತ್.

‘ಒಂದೂವರೆ ವರ್ಷದ ಹಿಂದೆ ಉದ್ಯಮ ಆರಂಭಿಸಿದಾಗ ಹೊರಗಿಂದ ಸಿದ್ಧ ಉತ್ಪನ್ನಗಳನ್ನು ತಂದು ಮಾರಾಟ ಮಾಡುತ್ತಿದ್ದೆವು. ಈಗ ನಾವೇ ಇಲ್ಲಿ ಘಟಕ ಪ್ರಾರಂಭಿಸಿ, ಕಿಟಕಿ, ಬಾಗಿಲುಗಳನ್ನು ಸಿದ್ಧಪಡಿಸುತ್ತೇವೆ. ಉದ್ಯಮಿಯಾಗಿರುವ ಮಾವ, ಮಧುರಾ ಇಂಡಸ್ಟ್ರಿಯ ಶ್ರೀಕಾಂತ ಹೆಗಡೆ ನನಗೆ ಪ್ರೇರಣೆಯಾದರು. ಉತ್ತರ ಕರ್ನಾಟಕ, ಕರಾವಳಿ ಭಾಗಕ್ಕೆ ಯುಪಿವಿಸಿ ಉತ್ಪನ್ನಗಳನ್ನು ಪೂರೈಕೆ ಮಾಡುತ್ತಿದ್ದೇವೆ. ಉತ್ಪಾದನೆ ವಿಭಾಗ ನನ್ನ ಹೊಣೆಗಾರಿಕೆಯಾದರೆ, ಹುಬ್ಬಳ್ಳಿ ಕಚೇರಿಯ ಮಾರ್ಕೆಟಿಂಗ್ ವಿಭಾಗವನ್ನು ಸಮರ್ಥ ನೋಡಿಕೊಳ್ಳುತ್ತಾರೆ’ ಎಂದು ಅವರು ವಿವರಿಸಿದರು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !