ಭಾನುವಾರ, ಜೂಲೈ 5, 2020
28 °C

ಕಾರವಾರ: ಕದ್ರಾ ಜಲಾಶಯದ ಹಿನ್ನೀರಿಯಲ್ಲಿ ಮುಳುಗಿ ಯುವಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ತಾಲ್ಲೂಕಿನ ವಿರ್ಜೆ ಗ್ರಾಮದಲ್ಲಿ ಕದ್ರಾ ಜಲಾಶಯದ ಹಿನ್ನೀರಿನಲ್ಲಿ ಭಾನುವಾರ ಈಜುತ್ತಿದ್ದಾಗ ನೀರುಪಾಲಾಗಿದ್ದ ಯುವಕ ಮಂಜುನಾಥ ಸುರೇಶ ಪಾಗಿ (24) ಅವರ ಮೃತದೇಹವು ಸೋಮವಾರ ಪತ್ತೆಯಾಗಿದೆ. 

ಅವರು ಮಧ್ಯಾಹ್ನ 12.30ರ ಸುಮಾರಿಗೆ ತನ್ನ ಗೆಳೆಯರ ಜೊತೆ ನದಿಯ ದಡಕ್ಕೆ ತೆರಳಿದ್ದರು. ನದಿಯಲ್ಲಿ ಸುಮಾರು 40 ಮೀಟರ್‌ಗಳಷ್ಟು ದೂರ ಈಜುತ್ತ ಸಾಗಿದ್ದ ಅವರು, ಇದ್ದಕ್ಕಿದ್ದಂತೆ ನೀರಿನಲ್ಲಿ ಮುಳುಗಿದ್ದರು. ಜೊತೆಗಿದ್ದವರು ರಕ್ಷಿಸಲು ಮುಂದಾದರೂ ಸಾಧ್ಯವಾಗಲಿಲ್ಲ. ಮುಖ್ಯರಸ್ತೆಯಿಂದ ಸುಮಾರು ಒಂದು ಕಿಲೋಮೀಟರ್ ಒಳಗಿರುವ ನಿರ್ಜನ ಪ್ರದೇಶದಲ್ಲಿ ಅವಘಡ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಐ.ಟಿ.ಐ ವಿದ್ಯಾಭ್ಯಾಸ ಮಾಡಿದ್ದ ಮಂಜುನಾಥ, ಕೈಗಾ ಅಣುವಿದ್ಯುತ್ ಸ್ಥಾವರದಲ್ಲಿ ನಾಲ್ಕು ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. 

ಸ್ಥಳಕ್ಕೆ ಮಲ್ಲಾಪುರ ಪೊಲೀಸ್ ಠಾಣೆ ಪಿ.ಎಸ್.ಐ ವಿಜಯಲಕ್ಷ್ಮಿ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು