ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣಶಿಯ ಯುವಕನಿಗೆ ಗೋವಾದಲ್ಲಿ ಕೋವಿಡ್ ದೃಢ

ಭಟ್ಕಳದ ಹಿರಿಯ ವ್ಯಕ್ತಿಗೂ ಸೋಂಕು ದೃಢ
Last Updated 17 ಮೇ 2020, 14:22 IST
ಅಕ್ಷರ ಗಾತ್ರ

ಕಾರವಾರ: ಗೋವಾದಲ್ಲಿ ಉದ್ಯೋಗದಲ್ಲಿರುವ ಜೊಯಿಡಾ ತಾಲ್ಲೂಕಿನ ಅಣಶಿಯ 23 ವರ್ಷದ ಯುವಕನಿಗೆ ಕೋವಿಡ್ 19 ಭಾನುವಾರ ದೃಢಪಟ್ಟಿದೆ.

ಗೋವಾದ ವಾಸ್ಕೊದಲ್ಲಿ ಔಷಧಿ ತಯಾರಿಕಾ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಆತ, ಮಾರ್ಚ್ 26ರಂದು ಅಣಶಿಗೆ ಬಂದಿದ್ದರು.‍ಪುನಃ ಮೇ 14ರಂದು ಪೋಳೆಂ ಚೆಕ್‌ಪೋಸ್ಟ್ ಮೂಲಕ ಗೋವಾಕ್ಕೆ ತೆರಳಿದ್ದರು. ಆ ಸಂದರ್ಭದಲ್ಲಿ ಅವರನ್ನು ಅಲ್ಲಿನ ಅಧಿಕಾರಿಗಳು ಕ್ವಾರಂಟೈನ್ ಮಾಡಿ ಗಂಟಲುದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದರು.

ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ‘ಯುವಕ ಸಂಚರಿಸಿದ ಪ್ರದೇಶಗಳ ಬಗ್ಗೆ ಮತ್ತು ಕುಟುಂಬದ ಮಾಹಿತಿ ಕಲೆ ಹಾಕಲಾಗಿದೆ. ತಾನು ಪೋಳೆಂ ಚೆಕ್‌‍ಪೋಸ್ಟ್‌ನಲ್ಲಿ ತಪಾಸಣೆಗೆಂದುಮೂರುಗಂಟೆ ನಿಂತಿದ್ದು ಹೊರತಾಗಿ ಮತ್ತೆಲ್ಲೂ ಪ್ರಯಾಣಿಸಿಲ್ಲ ಎಂದು ಹೇಳಿದ್ದಾರೆ. ಉಳಿದಂತೆ, ಅಣಶಿ ಸಮೀಪ ಅವರ ಮನೆ ಒಂದೇ ಇದ್ದು, ಸುತ್ತಮುತ್ತ ಬೇರೆ ಜನವಸತಿಯಿಲ್ಲ. ಮನೆಯಲ್ಲಿ ತಂದೆ, ತಾಯಿ, ಅಣ್ಣ ಇದ್ದಾರೆ.ಅವರ ಆರೋಗ್ಯವನ್ನು ತಪಾಸಣೆ ಮಾಡಲಾಗುತ್ತದೆ.ಅತ್ತಿಗೆ ಮತ್ತು ಮಗು ಅವರ ತಾಯಿ ಮನೆಯಲ್ಲಿದ್ದಾರೆ’ ಎಂದು ತಿಳಿಸಿದರು.

‘ಯುವಕನಿಗೆ ಗೋವಾದಲ್ಲಿ ಚಿಕಿತ್ಸೆ ಮುಂದುವರಿಯಲಿದೆ. ಏನಾದರೂ ಸಮಸ್ಯೆಯಿದ್ದರೆ ಸಂಪರ್ಕಿಸಲು ತಿಳಿಸಲಾಗಿದೆ’ ಎಂದರು.

ಭಟ್ಕಳದ68 ವರ್ಷದ ವ್ಯಕ್ತಿಗೆ(ರೋಗಿ ಸಂಖ್ಯೆ 1147) ಕೋವಿಡ್ 19 ಇರುವುದು ಪುಣೆಯ ಪ್ರಯೋಗಾಲಯದಲ್ಲೂ ದೃಢಪಟ್ಟಿದೆ. 740ನೇ ಸಂಖ್ಯೆಯ ರೋಗಿಯ ಸಂ‍ಪರ್ಕಕ್ಕೆ ಬಂದಿದ್ದ ಅವರ ಗಂಟಲು ದ್ರವದ ಮಾದರಿಯನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿ ಪಾಸಿಟಿವ್ ಎಂದು ಬಂದಿತ್ತು.ಅವರು ಒಂದು ವಾರದಿಂದಭಟ್ಕಳದ ಆಸ್ಪತ್ರೆಯಲ್ಲಿಈಗಾಗಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದರೊಂದಿಗೆ, ಜಿಲ್ಲೆಯಲ್ಲೇ ಇರುವ ಸಕ್ರಿಯ ಪ್ರಕರಣಗಳ ಸಂಖ್ಯೆ 32ಕ್ಕೇರಿದೆ. ಒಟ್ಟು ಸೋಂಕಿತರ ಸಂಖ್ಯೆ43 ಆಗಿದ್ದು, 11 ಮಂದಿ ಈಗಾಗಲೇ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT