ಮಂಗಳವಾರ, ಜೂನ್ 2, 2020
27 °C

ನೆತ್ತಿ ಮೇಲೆ ಬಿಸಿಲಿದ್ದರೂ ಕೆಲ ನಿಮಿಷ ಮೂಡದ ನೆರಳು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಶೂನ್ಯ ನೆರಳಿನ ವಿದ್ಯಮಾನವನ್ನು ಇಲ್ಲಿನ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಗುರುವಾರ ದಾಖಲಿಸಲಾಯಿತು.  ನೆತ್ತಿ ಸುಡುವಂಥ ಬಿಸಿಲಿದ್ದರೂ ನೆರಳು ಕಾಣಿಸದ ಸನ್ನಿವೇಶ ಕೆಲವು ನಿಮಿಷಗಳವರೆಗೆ ಮುಂದುವರಿಯಿತು.

ಭೂಮಿಯು ಸೂರ್ಯನಿಗೆ ಪ್ರದಕ್ಷಿಣೆ ಹಾಕುತ್ತ 23.5 ಡಿಗ್ರಿ ದಕ್ಷಿಣ ಅಕ್ಷಾಂಶ ಮತ್ತು 23.5 ಡಿಗ್ರಿ ಉತ್ತರ ರೇಖಾಂಶಗಳ ನಡುವೆ ಹಾದು ಹೋಗುತ್ತದೆ. ಆಗ ಭೂಮಿಯಲ್ಲಿ ನೆರಳು ಗೋಚರಿಸುವುದಿಲ್ಲ. ಕರ್ಕಾಟಕ ವೃತ್ತ ಮತ್ತು ಮಕರ ಸಂಕ್ರಾಂತಿ ವೃತ್ತದ ನಡುವೆ ಇರುವ ಪ್ರದೇಶಗಳಲ್ಲಿ ಪ್ರತಿ ವರ್ಷ ಎರಡು ಬಾರಿ ಈ ವಿದ್ಯಮಾನ ನಡೆಯುತ್ತದೆ.

ಈ ಬಗ್ಗೆ ಮಾಹಿತಿ ನೀಡಿದ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದ ಕ್ಯುರೇಟರ್ ಸಂಜೀವ ದೇಶಪಾಂಡೆ, ‘ನಗರದಲ್ಲಿ ಗುರುವಾರ ಮಧ್ಯಾಹ್ನ 12 ಗಂಟೆಯಿಂದ 12.35ರ ಅವಧಿಯಲ್ಲಿ ನೆರಳು ಮೂಡಲಿಲ್ಲ. ಈ ಸಮಯವು ಒಂದು ಊರಿನಿಂದ ಮತ್ತೊಂದು ಊರಿಗೆ ಸ್ವಲ್ಪ ವ್ಯತ್ಯಾಸವಾಗುತ್ತದೆ. ನಗರದಲ್ಲಿ  ಕಳೆದ ವರ್ಷ ಜೂನ್‌ನಲ್ಲಿ ನಡೆದಿತ್ತು’ ಎಂದು ವಿವರಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು