ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1.15 ಲಕ್ಷ ಸಸಿ ನೆಡಲು ಜಿ.ಪಂ. ಯೋಜನೆ

ಒಂದೇ ದಿನ ಜಿಲ್ಲೆಯ 231 ಗ್ರಾ.ಪಂ.ಗಳಲ್ಲಿ ಗಿಡ ನೆಡುವ ಕಾರ್ಯಕ್ರಮ
Last Updated 3 ಜೂನ್ 2019, 19:45 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯಲ್ಲಿ ಸುಮಾರು 1.15 ಲಕ್ಷ ಸಸಿಗಳನ್ನು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನೆಡಲು ಜಿಲ್ಲಾ ಪಂಚಾಯ್ತಿಯಿಂದ ಯೋಜನೆ ರೂಪುಗೊಂಡಿದೆ. ‘ಸ್ವಚ್ಛ ಮೇವ ಜಯತೇ’ ಆಂದೋಲನದ ಭಾಗವಾಗಿಜೂನ್11ರಂದು ಎಲ್ಲ 231 ಗ್ರಾಮ ಪಂಚಾಯ್ತಿಗಳಲ್ಲಿ ತಲಾ 500 ಗಿಡಗಳನ್ನು ನೆಡಲು ತಯಾರಿ ನಡೆದಿದೆ.

ಈ ಗಿಡ ನೆಡುವ ಕಾರ್ಯಕ್ಕೆ ಉದ್ಯೋಗ ಖಾತರಿ ಯೋಜನೆಯ ಕೂಲಿ ಕಾರ್ಮಿಕರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಎಲ್ಲ ಗ್ರಾಮ ಪಂಚಾಯ್ತಿಗಳಲ್ಲಿಅಗತ್ಯ ಗುಂಡಿಗಳನ್ನು ತೋಡುವ ಕಾರ್ಯ ಈಗಾಗಲೇ ಶುರು ಮಾಡಲಾಗಿದೆ. ಯೋಜನೆಯ 60/40 ಅನುಪಾತದ ನಿಯಮದಂತೆ, ಶೇ 60ರಷ್ಟನ್ನು ಹೊಂಡ ತೆಗೆಯುವ ಕೂಲಿಕಾರರ ವೇತನಕ್ಕೆ, ಶೇ 40ನ್ನು ಗಿಡಗಳ ಖರೀದಿ ಹಾಗೂ ಸಾಗಣೆಗೆ ವೆಚ್ಚ ಮಾಡಲಾಗುತ್ತಿದೆ.

‘ಇದೇ 6ರಂದು ಪರಿಸರ ದಿನಾಚರಣೆಯನ್ನು ‘ಸ್ವಚ್ಛ ಮೇವ ಜಯತೇ’ ಎಂದು ಆಚರಿಸಲು ಈ ಹಿಂದೆ ಸರ್ಕಾರದಿಂದ ಆದೇಶ ಬಂದಿತ್ತು. ಈ ಆಂದೋಲನದ ಅಡಿ, ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ನಿರ್ವಹಣೆ ಕುರಿತು ಗ್ರಾಮೀಣ ಸಮುದಾಯದಲ್ಲಿ ಜಾಗೃತಿ ಮೂಡಿಸುವುದು, ಪ್ರಬಂಧ ಸ್ಪರ್ಧೆಗಳ ಆಯೋಜನೆ, ಶೌಚಾಲಯ ಬಳಕೆ ಅಭಿಯಾನ ಹೀಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಆದೇಶದಲ್ಲಿ ನಿರ್ದೇಶನ ನೀಡಲಾಗಿತ್ತು. ಆದರೆ, ಕಾರಣಾಂತರಗಳಿಂದ ಇದನ್ನು ಇದೇ 11ರಿಂದ ಜೂನ್ 10ರ ವರೆಗೆ ಆಚರಿಸಲು ಸರ್ಕಾರ ಆದೇಶಿಸಿದೆ’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಯೋಜನಾ ಅಧಿಕಾರಿ ವಿ.ಎಂ.ಹೆಗಡೆ ತಿಳಿಸಿದರು.

‘ಇದೇ 11ರಂದು ತಲಾ 500ರಷ್ಟು ಗಿಡ ನೆಡುವ ಮೂಲಕ ‘ಸ್ವಚ್ಛ ಮೇವ ಜಯತೇ’ ಆಂದೋಲನಕ್ಕೆ ಚಾಲನೆ ನೀಡುವಂತೆ ಈಗಾಗಲೇ ಎಲ್ಲ ಗ್ರಾಮ ಪಂಚಾಯ್ತಿಗಳಿಗೆ ನಿರ್ದೇಶನ ನೀಡಲಾಗಿದೆ. ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ವಿಭಾಗ ಹಾಗೂ ತೋಟಗಾರಿಕೆ ಇಲಾಖೆಯಿಂದ ಗಿಡಗಳನ್ನು ಪ್ರತಿ ಗ್ರಾಮ ಪಂಚಾಯ್ತಿಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಅಲ್ಲಿನ ಪ್ರಮುಖರು ಹಾಗೂ ಗ್ರಾಮ ಪಂಚಾಯ್ತಿ ಪದಾಧಿಕಾರಿಗಳು ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ’ ಎಂದು ಅವರು ವಿವರಿಸಿದರು.

‘ಜಿಲ್ಲೆಯಲ್ಲಿ ಮುಂಗಾರು ಮಳೆಯುಇದೇ 10ರಂದು ಪ್ರವೇಶಿಸುವ ಸಾಧ್ಯತೆಯೂ ಇರುವುದರಿಂದ ಗಿಡಗಳನ್ನು ನೆಡಲು ಇದು ಕೂಡ ಸಹಕಾರವಾಗಲಿದೆ. ಹಣ್ಣು– ಹೂವು ಹಾಗೂ ನೆರಳು ನೀಡುವ ಗಿಡಗಳನ್ನು ನೆಡಲು ಈ ಅಭಿಯಾನದಲ್ಲಿ ಉದ್ದೇಶಿಸಲಾಗಿದೆ. ಸಾರ್ವಜನಿಕರೂ ಇದಕ್ಕೆ ಸಹಕಾರ ನೀಡಬೇಕು’ ಎಂದು ಅವರು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT