ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಂತ ಹಣದಿಂದ ಹೂಳು ತೆಗೆಸಿದ ಜಿ.ಪಂ. ಸದಸ್ಯ

Last Updated 3 ಜೂನ್ 2019, 19:30 IST
ಅಕ್ಷರ ಗಾತ್ರ

ಜೊಯಿಡಾ:ತಾಲ್ಲೂಕಿನ ಚಾವೂರ್ಲಿ ಗ್ರಾಮದ ಕೆರೆಯಲ್ಲಿದ್ದ ಹೂಳನ್ನು ಜಿಲ್ಲಾ ಪಂಚಾಯ್ತಿಸದಸ್ಯ ರಮೇಶ ನಾಯ್ಕ ತಮ್ಮ ಸ್ವಂತ ಖರ್ಚಿನಿಂದ ತೆರವು ಮಾಡಿಸುತ್ತಿದ್ದಾರೆ.

ಪ್ರಧಾನಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಈ ಕೆರೆಯು ನೂರಾರು ವರ್ಷಗಳ ಹಿಂದಿನದ್ದಾಗಿದೆ. ಚಾವೂರ್ಲಿ, ಮಾನಾಯಿ, ಭಾಮಣಗಿ ಭಾಗದ ಬಾವಿಗಳಿಗೆ ನೀರನ್ನು ಪೂರೈಸುತ್ತಿತ್ತು.ಹಲವು ವರ್ಷಗಳಿಂದ ಹೂಳು ತುಂಬಿನೀರು ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾಗಿತ್ತು. ಈ ಬಾರಿ ಬರಗಾಲದ ಪರಿಣಾಮ ಸಂಪೂರ್ಣಬತ್ತಿ ಹೂಳು ಕಾಣುತ್ತಿತ್ತು.

ಸುಮಾರು ಒಂದು ಎಕರೆ ವಿಸ್ತಾರದಲ್ಲಿರುವ ಕೆರೆಯನ್ನು ಹಿಟಾಚಿ ಯಂತ್ರದಮೂಲಕ ಸ್ವಚ್ಛಗೊಳಿಸಲಾಗುತ್ತಿದೆ. ಈ ಸಂದರ್ಭದಲ್ಲಿರಮೇಶ ನಾಯ್ಕ ಖುದ್ದು ಹಾಜರಿದ್ದು,ಕೆಲಸಗಾರರಿಗೆ ಮಾರ್ಗದರ್ಶನ ನೀಡಿದರು. ಅವರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT