ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಸಾತ್ಮಕವಾಗಿ ಕೋಣಗಳ ಸಾಗಣೆ: ನಾಲ್ವರ ಬಂಧನ

Last Updated 21 ಅಕ್ಟೋಬರ್ 2021, 7:11 IST
ಅಕ್ಷರ ಗಾತ್ರ

ಅಂಕೋಲಾ: ಹಿಂಸಾತ್ಮಕವಾಗಿ 17 ಕೋಣಗಳನ್ನು ಲಾರಿಯಲ್ಲಿ ತುಂಬಿಕೊಂಡು, ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಗುರುವಾರ ನಸುಕಿನಲ್ಲಿ ಬಂಧಿಸಿದ ಅಂಕೋಲಾ ಪೊಲೀಸರು, ಲಾರಿ ಮತ್ತು ಕೋಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ತಾಲ್ಲೂಕಿನ ಕೋಡ್ಸಣಿ ಕ್ರಾಸ್ ಬಳಿ ಲಾರಿಯಲ್ಲಿ ಕೋಣಗಳನ್ನು ಸಾಗಿಸುತ್ತಿರುವ ಕುರಿತು ಖಚಿತ ಮಾಹಿತಿಯ ಮೇರೆಗೆ ಗುರುವಾರ ನಸುಕಿನಲ್ಲಿ ಪೊಲೀಸರು ದಾಳಿ ನಡೆಸಿದರು. ಈ ವೇಳೆ ಕೋಣಗಳನ್ನು ಹಗ್ಗದಿಂದ ಬಿಗಿದು ಕಟ್ಟಿ, ಹಿಂಸಾತ್ಮಕವಾಗಿ ಲಾರಿಯಲ್ಲಿ ತುಂಬಿರುವುದು ಕಂಡುಬಂತು. ಲಾರಿಯ ಮುಂಭಾಗದಲ್ಲಿ ಬೆಂಗಾವಲು ವಾಹನವಾಗಿ ಇನ್ನೋವಾ ಕಾರು ಬಳಸಲಾಗಿತ್ತು. ಸ್ಥಳದಲ್ಲಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಅಂಕೋಲಾ ಶಿರಗುಂಜಿಯ ಬೊಮ್ಮಯ್ಯ ಬೀರಣ್ಣ ನಾಯಕ (82), ಬೆಳ್ತಂಗಡಿ ಮೂಡಕೋಡಿಯ ಹೈದರ್ ರೆಮಲನ್ ಬ್ಯಾರಿ (40), ಹಾಸನ ಹಳೆಕೊಪ್ಪಲಿನ ಮಂಜೇಗೌಡ ಜವರೇಗೌಡ (62) ಹಾಗೂ ಕೇರಳ ಕಾಸರಗೋಡು ಅಲಂಪಡಿಯ ಅಬ್ದುಲ್ ರಿಯಾಸ್ ಮಹಮದ್ (27) ಬಂಧಿತ ಆರೋಪಿಗಳು. ದಾಳಿಯ ವೇಳೆ ಇನ್ನೊಬ್ಬ ಆರೋಪಿ ಕೇರಳ ಕಾಸರಗೋಡು ಅಲಂಪಡಿಯ ಅಬೂಬಕ್ಕರ್ ದಿಲ್ಶಾದ್ ಪರಾರಿಯಾಗಿದ್ದಾನೆ.

ಬಂಧಿತರಿಂದ 17 ಕೋಣಗಳು, ಲಾರಿ, ಇನ್ನೋವಾ ಕಾರು, ಮೂರು ಮೊಬೈಲ್ ಫೋನ್‌ಗಳು ಹಾಗೂ ರೂಪಾಯಿ 30 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ.

ಸಿ.ಪಿ.ಐ ಸಂತೋಷ ಶೆಟ್ಟಿ ನೇತೃತ್ವದಲ್ಲಿ ಪಿ.ಎಸ್.ಐ ಪ್ರೇಮನಗೌಡ ಪಾಟೀಲ್, ಪಿ.ಎಸ್.ಐ ಪ್ರವೀಣಕುಮಾರ ಮತ್ತು ಅಪರಾಧ ವಿಭಾಗದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಕೋಣಗಳನ್ನು ನ್ಯಾಯಾಲಯದ ಅನುಮತಿಯೊಂದಿಗೆ ಗೋಶಾಲೆಗೆ ಕಳುಹಿಸಲಾಗುವುದು ಎಂದು ಸಿ.ಪಿ.ಐ ಮಾಹಿತಿ ನೀಡಿದರು.

ಆರೋಪಿಗಳು ವಿವಿಧ ಸ್ಥಳಗಳಿಂದ ಕೋಣಗಳನ್ನು ತಂದು ಅಂಕೋಲಾದ ಶಿರಗುಂಜಿ ಪ್ರದೇಶದಲ್ಲಿ ಸಂಗ್ರಹಿಸುತ್ತಿದ್ದರು. ನಂತರ ಇಲ್ಲಿಂದ ಕೇರಳಕ್ಕೆ ಸಾಗಿಸುತ್ತಿದ್ದರು. ಜಾನುವಾರನ್ನು ಸಾಗಿಸಲು ಹೈಟೆಕ್ ತಂತ್ರಗಳನ್ನು ಉಪಯೋಗಿಸಲಾಗುತ್ತದೆ. ಇನ್ನೋವಾ ಕಾರನ್ನು ಬೆಂಗಾವಲು ವಾಹನವಾಗಿ ಬಳಸುತ್ತಿದ್ದರು. ಜಾನುವಾರನ್ನು ಸಾಗಿಸಲು ಅನುಕೂಲವಾಗುವಂತೆ ಹೊಸ ಲಾರಿಯನ್ನು ಮಾರ್ಪಡಿಸಿದ್ದೂ ದಾಳಿಯಲ್ಲಿ ಕಂಡುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT