ಶಿರಸಿ: ‘ಅಘನಾಶಿನಿ ಕಣಿವೆಯ ವಿಶಿಷ್ಟ ಅಪ್ಪೆಮಿಡಿ ಮಾವಿನ ವೃಕ್ಷ ಸಮೂಹವಿರುವ ಪ್ರದೇಶವನ್ನು ಪಾರಂಪರಿಕ ಜೀವವೈವಿಧ್ಯ ತಾಣ ಎಂದು ಘೋಷಿಸಲು ರಾಜ್ಯ ಜೀವವೈವಿಧ್ಯ ಮಂಡಳಿ ನಿರ್ಧರಿಸಿದೆ’ ಎಂದು ಮಂಡಳಿ ಅಧ್ಯಕ್ಷ ವಡ್ನಾಳ ಜಗದೀಶ ತಿಳಿಸಿದರು.

ಅಘನಾಶಿನಿ ನದಿ ತೀರದ ನಾಗರಕೋಡಿಯಲ್ಲಿ ಬುಧವಾರ ಜರುಗಿದ ಅಪ್ಪೆಮಿಡಿ ಪಾದಯಾತ್ರೆಯ ಸಮಾರೋಪ ಹಾಗೂ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಈಗಾಗಲೇ ಈ ಕುರಿತು ಪ್ರಸ್ತಾವ ಬಂದಿದ್ದು, ಪರಿಶೀಲಿಸಲಾಗಿದೆ. ಈ ಪ್ರದೇಶವನ್ನುಪಾರಂಪರಿಕ ಜೀವವೈವಿಧ್ಯ ತಾಣಎಂದು ಘೋಷಣೆ ಮಾಡುವ ನಿರ್ಧಾರ ಕೈಗೊಂಡಿದ್ದು, ಶೀಘ್ರವೇ ಅಧಿಕೃತ ಘೋಷಣೆ ಮಾಡುತ್ತೇವೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಪಶ್ಚಿಮ ಘಟ್ಟಗಳ ಕಾರ್ಯಪಡೆ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ‘ಅಪ್ಪೆಮಿಡಿ ವೃಕ್ಷನಾಶ ತಡೆಗಟ್ಟಲು ಅರಣ್ಯ ಇಲಾಖೆಯು ತಕ್ಷಣವೇ ಗ್ರಾಮ ಕಾವಲು ಸಮಿತಿಗಳನ್ನು ರಚಿಸಬೇಕು’ ಎಂದು ಒತ್ತಾಯಿಸಿದರು.

ಸಂಚಾಲಕ ಬಾಲಚಂದ್ರ ಸಾಯಿಮನೆ ಅವರು, ‘ಮಾರ್ಚ್ 30ರಿಂದ ಆರಂಭವಾದ ಅಪ್ಪೆಮಿಡಿ ಮಾವು ವೃಕ್ಷ ವೈವಿಧ್ಯ ಸಮೀಕ್ಷೆಯ ಪಾದಯಾತ್ರೆಯು ಅಘನಾಶಿನಿ ನದಿಯ ದುರ್ಗಮ ಕಣಿವೆ ಮತ್ತು ದಟ್ಟಾರಣ್ಯದ ಇಳಿಜಾರುಗಳಲ್ಲಿ ಸಾಗಿ ಹಲವು ಅಧ್ಯಯನಪೂರ್ಣ ಸಂಗತಿಗಳನ್ನು ಪತ್ತೆಹಚ್ಚಿದೆ’ ಎಂದು ಮಾಹಿತಿ ನೀಡಿದರು.

ಇದೇ ವೇಳೆ ತೋಟಗಾರಿಕಾ ಇಲಾಖೆಯ ಅಧಿಕಾರಿ ಅರುಣ ಅವರು ಶಿವಮೊಗ್ಗ–ಶಿರಸಿ ಭಾಗದ ಅಪ್ಪೆಮಿಡಿಗೆ ಈಗಾಗಲೇ ಭೌಗೋಳಿಕ ಸೂಚಕ ಮಾನ್ಯತೆ ದೊರೆತಿರುವುದನ್ನು ನೆನಪಿಸಿದರು. ವಲಯ ಅರಣ್ಯಾಧಿಕಾರಿ ಉಷಾ ಕಬ್ಬೇರ ಅವರು ಅಘನಾಶಿನಿಯ ವಿಶಿಷ್ಟ ತಳಿಗಳ ರಕ್ಷಣೆಗೆ ಪ್ರಸ್ತಾವ ಸಲ್ಲಿಸಲು ತಿಳಿಸಿದರು.ಗೋಪಾಲಕೃಷ್ಣ ತಂಗರಮನೆ ಸ್ವಾಗತಿಸಿದರು. ಮಹೇಶ ಮುಕ್ರಮನೆ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-20-1047217928

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.