ಕುಮಟಾ: ತಾಲ್ಲೂಕಿನ ಅಘನಾಶಿನಿ ನದಿ ಅಳಿವೆಯಲ್ಲಿ ಈ ವರ್ಷಕ್ಕೆ ಅಪರೂಪಕ್ಕೆ ಹೇರಳ ಪ್ರಮಾಣದಲ್ಲಿ ಅಡ್ಡ ಬೆಳಚು ಲಭಿಸಿದೆ. ಅವುಗಳನ್ನು ಸಂಗ್ರಹಿಸಿ, ಮಾರಾಟ ಮಾಡುವವರಿಗೆ ದುಡಿಮೆಗೆ ದಾರಿ ಸಿಕ್ಕಿದ್ದು ಒಂದೆಡೆಯಾದರೆ ಬೆಳಚು ಖಾದ್ಯ ಪ್ರಿಯರಿಗೂ ಖುಷಿ ತಂದಿದೆ.

ಸಣ್ಣ ದೋಣಿಯಲ್ಲಿ ಇಬ್ಬರೇ ನದಿಗೆ ತೆರಳಿ ಮೂರು ತಾಸಿನಲ್ಲಿ ಸುಮಾರು 60ರಿಂದ 70 ಕೆ.ಜಿ. ಅಡ್ಡ ಬೆಳಚು ತರುತ್ತಿದ್ದಾರೆ. ಅಘನಾಶಿನಿ ನದಿಯಂಚಿಯಲ್ಲೇ ಬೆಳಚಿನ ಸಾಟಿಯರಿಗೆ ಅಂದರೆ ಸಗಟು ಖರೀದಿದಾರರಿಗೆ ಬೆಳಚು ಆರಿಸಿ ತಂದವರು ಕೆ.ಜಿ. ಗೆ ₹80 ರಂತೆ ಮಾರಾಟ ಮಾಡುತ್ತಾರೆ. ಅವರು ಅದನ್ನು ಹೆಚ್ಚಿನ ಬೆಲೆಗೆ ಚಿಲ್ಲರೆ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದಾರೆ.

‘ಅತ್ಯಂತ ರುಚಿಕರ ಹಾಗೂ ಕ್ಯಾಲ್ಸಿಯಂ, ಪ್ರೋಟಿನ್ ಹೇರಳ ಪ್ರಮಾಣದಲ್ಲಿರುವ ಅಡ್ಡ ಬೆಳಚು ಅತ್ಯುತ್ತಮ ಆಹಾರವಾಗಿದೆ. ಮೀನಿನ ಉತ್ಪನ್ನ ಕಡಿಮೆ ಆಗಿರುವ ಈ ಸಂದರ್ಭದಲ್ಲಿ ಬೆಳಚಿಗೆ ಎಲ್ಲಿಲ್ಲದ ಬೇಡಿಕೆ. ಮೀನು ಮಾರುಕಟ್ಟೆಯಲ್ಲಿ ಒಂದು ಕಿಲೋ ಅಂದರೆ, ಸುಮಾರು ನೂರು ಬೆಳಚಿಗೆ ₹150ಕ್ಕೆ ಕಡಿಮೆ ಇಲ್ಲದಂತೆ ಮಾರಾಟ ಆಗುತ್ತದೆ’ ಎನ್ನುತ್ತಾರೆ ಬೆಳಚು ಸಂಗ್ರಹಿಸುವ ಸಂತೋಷ ಗೌಡ.

‘ನದಿ, ಸಮುದ್ರದ ಇಳಿತದ ಆರಂಭದಲ್ಲಿ ದೋಣಿಯಲ್ಲಿ ಬೆಳಚು ಸಂಗ್ರಹಿಸಲು ಹೋಗುತ್ತೇವೆ. ನೀರು ಇಳಿಯುತ್ತಿರುವಾಗಲೇ ಎರಡು ತಾಸು ಬೆಳಚು ಆರಿಸಿ ಭರತ ಆರಂಭವಾಗುತ್ತಿದ್ದಂತೆಯೇ ವಾಪಾಸ್ಸಾಗುತ್ತೇವೆ. ಬೆಳಚು ಹಾಗೂ ಚಿಪ್ಪಿ ಒಟ್ಟಿಗೆ ಇರುವುದರಿಂದ ದಡಕ್ಕೆ ಬಂದ ಮೇಲೆ ಅವುಗಳನ್ನು ಪ್ರತ್ಯೇಕಿಸಲಾಗುತ್ತದೆ. ಸಗಟು ವ್ಯಾಪಾರಿಗಳು ಹಾಗೂ ಮನೆ ಮನೆಗೆ ಹೋಗಿ ಮಾರಾಟ ಮಾಡುವ ಮಹಿಳೆಯರು ಬೆಳಚು ಖರೀದಿಸುತ್ತಾರೆ. ಅಘನಾಶಿನಿ ಗ್ರಾಮದಲ್ಲಿ ನಿತ್ಯ 80ರಿಂದ 100 ಕುಟುಂಬಗಳು ಬೆಳಚು ತೆಗೆಯಲು ನದಿಗೆ ತೆರಳುತ್ತವೆ’ ಎಂದು ಅವರು ವಿವರಿಸಿದರು.

‘ನದಿಯಲ್ಲಿ ಜಾಸ್ತಿ ಉಪ್ಪಿನಂಶ ಇರುವ, ಉಸುಕು ಹಾಗೂ ನೀರು ಶುಚಿಯಾಗಿರುವ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದ ಅಡ್ಡ ಬೆಳಚು ಬೆಳೆಯುತ್ತದೆ. ಕುಮಟಾ ಹೊರತಾದ ಪ್ರದೇಶಗಳಲ್ಲಿ ತಲಾ 200 ಅಡ್ಡ ಬೆಳಚಿನ ಒಂದು ಪೊಟ್ಟಣಕ್ಕೆ ₹500ರಷ್ಟು ದರ ಇದೆ’ ಎಂದು ಕಡಲಜೀವ ವಿಜ್ಞಾನಿ ಪ್ರಕಾಶ ಮೇಸ್ತ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-20-1334898745

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.