ಕುಮಟಾ : ಹುಬ್ಬಳ್ಳಿಯಲ್ಲಿ ಏ. 26 ರಂದು ನಡೆಯುವ ರಾಜ್ಯ ಮಟ್ಟದ ಅಹಿಂದ ವಿಚಾರ ಸಂಕಿರ್ಣದಲ್ಲಿ ಜಿಲ್ಲೆಯಿಂದ 150ಕ್ಕೂ ಹೆಚ್ಚು ಆಯ್ದ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಅಹಿಂದ ಕರ್ನಾಟಕದ ಜಿಲ್ಲಾ ಸಂಚಾಲಕ ನಾಗೇಶ ನಾಯ್ಕ ಹೇಳಿದರು.

ಪಟ್ಟಣದಲ್ಲಿ ಬುಧವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, `ಪ್ರತೀ ತಾಲ್ಲೂಕಿನಿಂದ ಹತ್ತಕ್ಕೂ ಹೆಚ್ಚು ಪದಾಧಿಕಾರಿಗಳನ್ನು ವಿಚಾರ ಸಂಕಿರಣಕ್ಕೆ ಆಯ್ಕೆ ಮಾಡಲಾಗುವುದು. ಆಯಾ ತಾಲ್ಲೂಕು ಅಧ್ಯಕ್ಷರಿಗೆ ಪದಾಧಿಕಾರಿಗಳನ್ನು ಹುಬ್ಬಳ್ಳಿಯ ವಿಚಾರ ಸಂಕಿರಣಕ್ಕೆ ಕರೆದೊಯ್ಯುವ ಹೊಣೆಗಾರಿಕೆ ನೀಡಲಾಗಿದೆ’ ಎಂದರು.

`ಹುಬ್ಬಳ್ಳಿಯ ವಿಚಾರ ಸಂಕಿರಣದ ನಂತರ ಜಿಲ್ಲಾ ಮಟ್ಟದ ವಿಚಾರ ಸಂಕಿರಣವನ್ನು ಜಿಲ್ಲೆಯ ಮಧ್ಯವರ್ತಿ ಸ್ಥಳವಾದ ಕುಮಟಾದಲ್ಲಿ ನಡೆಸುವ ಬಗ್ಗೆ ದಿನಾಂಕ ನಿಗದಿಗೊಳಿಸಲಾಗುವುದು. ಈಚೆಗೆ ಲೋಕೊಪಯೋಗಿ ಇಲಾಖೆಯ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಇಲಾಖೆ ಸಚಿವ ಹಾಗೂ ಅಹಿಂದ ನಾಯಕ ಸತೀಶ ಜಾರಕಿಹೋಳಿ ಅವರು ಜಿಲ್ಲಾ ವಿಚಾರ ಸಂಕಿರ್ಣ ಕುಮಟಾದಲ್ಲಿ ನಡೆಸುವ ಬಗ್ಗೆ ಸ್ಥಳೀಯ ಮುಖಂಡರಿಗೆ ಸೂಚನೆ ನೀಡಿದ್ದಾರೆ’ ಎಂದರು.

ಅಹಿಂದ ಕರ್ನಾಟಕ ತಾಲ್ಲೂಕು ಘಟಕ ಅಧ್ಯಕ್ಷ ಸುಧಾಕರ ತಾರಿ, ತಿಮ್ಮಪ್ಪ ಮುಕ್ರಿ, ಸವಿತಾ ಮುಕ್ರಿ,ಆರ್.ಎಚ್. ನಾಯ್ಕ, ಯೋಗಾನಂದ ಗಾಂಧಿ, ಭಟ್ಕಳದ ರಾಮ ಮೊಗೇರ, ಎಂ.ಡಿ. ನಾಯ್ಕ, ಐತು ಗೊಂಡ, ಯಲ್ಲಾಪುರದ ಬೆನಿತ್ ಸಿದ್ದಿ, ಶಿರಸಿಯ ಶಿವಾನಂದ ನಾಯ್ಕ, ಅಬ್ದುಲ್ ಶೇಖ್, ಅಂಕೋಲಾದ ದಾಮೋದರ ನಾಯ್ಕ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-20-120233854

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.