ಅಂಕೋಲಾ: ತಾಲ್ಲೂಕಿನ ಅಡಿಗೋಣದ ಶ್ರೀ ಗಣೇಶ, ಶ್ರೀ ಬಾಗಿಲು ಜಟಗ ಹಾಗೂ ಶ್ರೀ ನಾಗದೇವತಾ ದೇವರ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಏಪ್ರಿಲ್ 23 ಮತ್ತು 24 ರಂದು ನಡೆಯಲಿದೆ ಎಂದು ಶ್ರೀ ಗಣೇಶ, ಶ್ರೀ ಬಾಗಿಲು ಜಟಗ ಹಾಗೂ ಶ್ರೀ ನಾಗದೇವತಾ ಸೇವಾ ಸಮಿತಿಯ ಅಧ್ಯಕ್ಷ ನಾಗರಾಜ ಬೀರಣ್ಣ ನಾಯಕ ಹೇಳಿದರು.

ಪಟ್ಟಣದಲ್ಲಿ ಸೋಮವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.

ಅಡಿಗೋಣದ ಸಾರ್ವಜನಿಕರ, ಭಕ್ತಾಧಿಗಳ ಹಾಗೂ ಪರ ಊರಿನಲ್ಲಿ ನೆಲೆಸಿರುವ ಗ್ರಾಮಸ್ತರ ಸಹಕಾರದೊಂದಿಗೆ ಗೋಕರ್ಣದ ಪ್ರಸಿದ್ಧ ಆಗಮಶಾಸ್ತ್ರ ಪಂಡಿತರಾದ ಮಾನ್ಯ ಶ್ರೀ ಸಾಂಬ ಭಟ್ಟ ಷಡಕ್ಷರಿ ಇವರ ನೇತೃತ್ವದಲ್ಲಿ ಏ.23 ಗುರುವಾರ ಸಂಜೆ 6 ಗಂಟೆಯಿಂದ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಾಗಿ ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಪ್ರತಿಷ್ಠಾಪನೆ, ತತ್ವ ಕಲಾ ಹವನ, ಶ್ರೀ ದುರ್ಗಾಹವನ, ಪೂರ್ಣಾಹುತಿ, ಮಹಾಪೂಜೆ, ಮಹಾಮಂಗಳಾರತಿ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಹಾಗೂ ಅದೇ ದಿನ ರಾತ್ರಿ ಊರಿನ ಬಾಲ ಕಲಾವಿದರಿಂದ ಲವ-ಕುಶ ಹಾಗೂ ನುರಿತ ಯುವ ಕಲಾವಿದರಿಂದ ಕಂಸವಧೆ ಎಂಬ ಪೌರಾಣಿಕ ಯಕ್ಷಗಾನ ಪ್ರಸಂಗಗಳು ಶ್ರೀ ದೇವರುಗಳ ಸಭಾಭವನದ ವೇದಿಕೆಯಲ್ಲಿ ನಡೆಯಲಿವೆ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-20-1503402203

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.