ಅಂಕೋಲಾ: 75 ವರ್ಷಗಳ ಹಿಂದೆ ಪರಮೇಶ್ವರ ನಾಯಕ ಅಗ್ರಗೋಣ ಅವರು ಆರಂಭಿಸಿದ ಗೌಂಟಿ ಶಾಲೆ ಈಗ ಅತ್ಯಂತ ಸುಸಜ್ಜಿತ ಶಾಲೆಯಾಗಿ ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನವನ್ನು ನೀಡುತ್ತಿದೆ. ಈ ಶಾಲೆಯಲ್ಲಿ ಅಡುಗೆ ಕೆಲಸವನ್ನು ಮಾಡುತ್ತಿದ್ದ ಗೌರಿ ಗೌಡ ನಿಧನ ಹೊಂದಿದ್ದು ಅವರ ಹೆಸರನ್ನು ಶಾಶ್ವತವಾಗಿಡಲು ಈ ಶಾಲೆಗೆ ಗೌರಿ ರಂಗಮಂದಿರವನ್ನು ನಿರ್ಮಿಸಲು ₹ 10 ಲಕ್ಷ ಅನುದಾನ ನೀಡುತ್ತೇನೆ ಎಂದು ಕಾರವಾರ - ಅಂಕೋಲಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಹೇಳಿದರು.

ತಾಲ್ಲೂಕಿನ ಬೈಲಕೇರಿಯಲ್ಲಿ ಶನಿವಾರ ನಡೆದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಮೃತ ಮಹೋತ್ಸವದ ಈ ಕಾರ್ಯಕ್ರಮ ಅತ್ಯಂತ ವಿಶೇಷ ಮತ್ತು ವಿಜೃಂಭಣೆಯಿಂದ ನಡೆಯುತ್ತಿದ್ದು ಪ್ರತಿಯೊಂದು ಶಾಲೆಗಳಲ್ಲಿಯೂ ಈ ರೀತಿಯ ಕಾರ್ಯಕ್ರಮ ನಡೆಸುವಂತಾಗಬೇಕು. ಗಂಗಾವಳಿ - ಮಂಜುಗುಣಿ ಸೇತುವೆ ನಿಮ್ಮೆಲ್ಲರ ಬಹು ವರ್ಷದ ಕನಸಾಗಿತ್ತು, ಆ ಕನಸನ್ನು ಪೂರ್ತಿಗೊಳಿಸಿದ್ದೇನೆ. ಪ್ರತಿಯೊಬ್ಬರೂ ನಿಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ನೀಡಿ ಎಂದರು.

ಶಾಲಾ ದ್ವಾರ ಬಾಗಿಲನ್ನು ಉದ್ಘಾಟಿಸಿ ಮಾತನಾಡಿದ ಉದ್ಯಮಿ ರಾಘವೇಂದ್ರ ದೇವರಬಾವಿ, ಶಾಲೆಯ ಮೂಲ ಸೌಕರ್ಯ ಅಭಿವೃದ್ಧಿಪಡಿಸುವ ಜೊತೆಯಲ್ಲಿ ಶಿಕ್ಷಣವನ್ನು ನೀಡಿದ ಈ ಶಾಲೆ ಇಂದು ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವುದು ಈ ಶಾಲೆಯನ್ನು ಪ್ರಾರಂಭಿಸಿದ ಪರಮೇಶ್ವರ ನಾಯಕ ಮತ್ತು ಎಲ್ಲ ಹಿರಿಯರಿಗೆ ಗೌರವ ಸಲ್ಲುತ್ತದೆ. ಶಾಲೆಯನ್ನು ಉಳಿಸಿ ಬೆಳೆಸಲು ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸಿ ಎಂದರು.

ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪಾಂಡುರಂಗ ಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮಿ ಪಾಟೀಲ, ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ಗಣಪತಿ ಗೌಡ, ಕಲ್ಪನಾ ನಾಯಕ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಮೇಶಗೌಡ, ಹಿರಿಯರಾದ ನಾರಾಯಣ ಗೌಡ, ವಿಜಯ್ ಗೌಡ, ಶಿಕ್ಷಕ ರಾಮಚಂದ್ರಗೌಡ, ಅರವಿಂದ ಗೌಡ ಇದ್ದರು. ಶಿಕ್ಷಕ ಶಾಂತರಾಮ್ ನಾಯಕ ಸ್ವಾಗತಿಸಿದರು, ಪತ್ರಕರ್ತ ಸುಭಾಷ್ ಕಾರೇಬೈಲ ನಿರೂಪಿಸಿದರು, ಲಕ್ಷ್ಮಣಗೌಡ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-20-1649812361

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.