ಅಂಕೋಲಾ: ‘ಗೃಹ ಸಚಿವರ ಹೆಸರು ಹೇಳಿಕೊಂಡು ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಆಟಾಟೋಪ ಮೆರೆಯುತ್ತಿದ್ದು, ಅದಕ್ಕೆ ಕಡಿವಾಣ ಹಾಕಬೇಕು. ಗೃಹ ಸಚಿವರ ಪ್ರಭಾವ ನಿಲ್ಲಿಸಬೇಕು’ ಎಂದು ಆರೋಪಿಸಿ ವಕೀಲ ನಾಗರಾಜ ನಾಯಕ ಪಟ್ಟಣದ ಪೊಲೀಸ್ ಠಾಣೆ ಎದುರು ಬುಧವಾರ ತಡರಾತ್ರಿಯಿಂದ ಧರಣಿ ನಡೆಸುತ್ತಿದ್ದಾರೆ.

‘ತಾಲ್ಲೂಕಿನ ವಂದಿಗೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ವೇಳೆ ಗೋಪಾಲಕೃಷ್ಣ ಅವರ ಕೆಲ ಬೆಂಬಲಿಗರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅವರ ವಿರುದ್ಧ ದೂರು ನೀಡಲು ಬಂದಾಗ, ನಮ್ಮೊಂದಿಗೆ ಬಂದ ಕೆಲವು ಅಮಾಯಕರ ಮೇಲೆ ಗೋಪಾಲಕೃಷ್ಣ ನಾಯಕ ಚಿತಾವಣೆಯಿಂದ ದೂರು ದಾಖಲಿಸಿದ್ದಾರೆ. ಗೃಹ ಸಚಿವರ ಹೆಸರ ದುರ್ಬಳಕೆ ಮಾಡಿಕೊಂಡು ಪೊಲೀಸರ ಮೇಲೆ ಒತ್ತಡ ಹೇರುವ ಕೆಲಸ ನಡೆಯುತ್ತಿದೆ’ ಎಂದು ನಾಗರಾಜ ನಾಯಕ ಆರೋಪಿಸಿದರು.

‘ವಂದಿಗೆಯಲ್ಲಿ ಅಮಾಯಕ ಹುಡುಗರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಗೋಪಾಲಕೃಷ್ಣ ನಾಯಕ ವಿರುದ್ಧ ದೂರು ದಾಖಲಾಯಿತು. ಅವರನ್ನು ಸೇರಿಸಿ ಮೂವರು ಆರೋಪಿಗಳ ಹೆಸರುಗಳನ್ನು ಕೈ ಬಿಡಲಾಯಿತು. ಅದೇ ಉಳಿದ ಪ್ರಕರಣಗಳಲ್ಲಿ ಪೊಲೀಸರು ಬೇರೆಯೇ ನಡೆದುಕೊಳ್ಳುತ್ತಾರೆ’ ಎಂದೂ ಆರೋಪಿಸಿದರು. ಪ್ರತಿಭಟನೆಗೆ ಕುಮಟಾ ಶಾಸಕ ದಿನಕರ ಶೆಟ್ಟಿ, ಕಾರವಾರ ಸೇರಿದಂತೆ ವಿವಿಧೆಡೆಯ ವಕೀಲರು ಬೆಂಬಲಿಸಿದರು.

‘ಕಳೆದ ಮೂರು ದಿನಗಳಿಂದ ನಾನು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಈ ಘಟನೆಯಲ್ಲಿ ನನ್ನ ಪಾತ್ರ ಇಲ್ಲ. ನನ್ನ ವಿರುದ್ಧ ಅನಗತ್ಯ ಆರೋಪ ಹೊರಿಸಲಾಗುತ್ತಿದೆ’ ಎಂದು ಗೋಪಾಲಕೃಷ್ಣ ನಾಯಕ ಪ್ರತಿಕ್ರಿಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-20-2112489830

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.