ಅಂಕೋಲಾ: ತಾಲ್ಲೂಕಿನ ಬೆಳಸೆ ಗ್ರಾಮದ ತಳಗದ್ದೆ ಕ್ರಾಸ್ ಬಳಿ ಟಾಟಾ ಕ್ಯಾಂಟರ್ ವಾಹನದಲ್ಲಿ ಭತ್ತದ ಚೀಲಗಳ ಮಧ್ಯೆ ತಲಾ 50 ಕೆ.ಜಿ ತೂಕದ ಒಟ್ಟು 192 ಪಡಿತರ ಅಕ್ಕಿಯ ಚೀಲಗಳನ್ನು ಇಟ್ಟು ಅಕ್ರಮವಾಗಿ ಸಾಗಿಸುತ್ತಿದ್ದ ₹3.7 ಲಕ್ಷ ಮೌಲ್ಯದ ಪಡಿತರ ಅಕ್ಕಿ ಚೀಲಗಳು ಮತ್ತು ಕೃತ್ಯಕ್ಕೆ ಬಳಸಿದ್ದ ವಾಹನವನ್ನು ಅಧಿಕಾರಿಗಳು ಮಂಗಳವಾರ ವಶಕ್ಕೆ ಪಡೆದ್ದಾರೆ.

ಈ ಅಕ್ರಮ ಪಡಿತರ ಸಾಗಾಣಿಕೆಯಲ್ಲಿ ಭಾಗಿಯಾದ ಆರೋಪದ ಮೇಲೆ ಅಂಕೋಲಾ ವಂದಿಗೆಯ ರಾಜೇಶ ಎಸ್.ಶೆಟ್ಟಿ, ಪ್ರತೀಕ್ ರಾಜೇಶ ಶೆಟ್ಟಿ, ಕುಮಟಾ ಮೂಲದ ವಾಹನ ಮಾಲೀಕ ಹರೀಶ ಪಟಗಾರ, ಯಲ್ಲಾಪುರದ ವಾಹನ ಚಾಲಕ ನಾರಾಯಣ ಶಂಕರ ಸಾಳಸ್ಕರ ಹಾಗೂ ಅಂಕೋಲಾದ ಹಮಾಲಿ ಕಾರ್ಮಿಕ ಜಗದೀಶ ಸುರೇಶ ಆಗೇರ ಸೇರಿ ಐವರ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-20-937631276

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.