ಅಂಕೋಲಾ: ತಾಲ್ಲೂಕಿನ ಶಕ್ತಿ ದೇವತೆ ಎಂದೇ ಖ್ಯಾತಿ ಪಡೆದ ಶಾಂತಾದುರ್ಗಾ ದೇವಿಯ ಬಂಡಿಹಬ್ಬವು ಗುರುವಾರ ರಾತ್ರಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.

ಅಕ್ಷಯ ತೃತೀಯದಿಂದ ಆರಂಭಗೊಂಡ ಈ ಪಾರಂಪರಿಕ ಹಬ್ಬವು ಪೌರ್ಣಿಮೆಯಂದು ನಡೆಯುವ ರಾಟೆಕಂಬವನ್ನು ಏರುವ ಸಂಪ್ರದಾಯದೊಂದಿಗೆ ಯಶಸ್ವಿಯಾಗಿ ಪೂರ್ಣಗೊಂಡಿತು.

ಗುರುವಾರ ಕುಂಬಾರಕೇರಿ ಮೂಲ ಕಳಸ ದೇವಸ್ಥಾನದಿಂದ ಚಿನ್ನಾಭರಣ ಹಾಗೂ ಪುಷ್ಪಗಳಿಂದ ಅಲಂಕರಿಸಲ್ಪಟ್ಟ ಕಳಸವನ್ನು ಹೊತ್ತು ಮೆರವಣಿಗೆಯೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಆಡುಕಟ್ಟೆಯಲ್ಲಿ ಪ್ರತಿಷ್ಠಾಪಿಸಲಾಯಿತು.

ಮೆರವಣಿಗೆಯ ವೇಳೆ ಕಳಸದ ಜೊತೆ ಛತ್ರ-ಚಾಮರದ ಸೊಬಗು, ಪಂಚವಾದ್ಯಗಳ ನಾದ, ಬಿಡಿಗುನಗ ಹಾಗೂ ಕಟಗಿದಾರರ ಸಾನ್ನಿಧ್ಯ ಹಬ್ಬದ ವೈಭವಕ್ಕೆ ಮೆರುಗು ತಂದಿತು. ಭಕ್ತರು ದೇವಿಗೆ ಪ್ರಿಯವಾದ ಮಲ್ಲಿಗೆ, ಅಬ್ಬಲಿ, ಸಂಪಿಗೆ ಹೂಗಳನ್ನು ಅರ್ಪಿಸಿ ಆರತಿ ಸಲ್ಲಿಸಿ ತಮ್ಮ ಭಕ್ತಿಭಾವ ವ್ಯಕ್ತಪಡಿಸಿದರು. ನಗರದೆಲ್ಲೆಡೆ ರಂಗೋಲಿ ಮತ್ತು ತೋರಣಗಳಿಂದ ಸಿಂಗಾರಗೊಂಡ ಬೀದಿಗಳಲ್ಲಿ ಕಳಸಕ್ಕೆ ಅದ್ಧೂರಿ ಸ್ವಾಗತ ನೀಡಲಾಯಿತು.

ಹೊರ ರಾಜ್ಯಗಳಲ್ಲಿ ನೆಲೆಸಿರುವ ಅಂಕೋಲಾ ಮೂಲದವರೂ ಊರಿಗೆ ಆಗಮಿಸಿ ಶ್ರದ್ಧಾ ಭಕ್ತಿಯಿಂದ ಹಬ್ಬವನ್ನು ಆಚರಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-20-866723708

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.