ಅಂಕೋಲಾ: ಪಟ್ಟಣದ ದೊಡ್ಡ ದೇವರೆಂದೇ ಖ್ಯಾತಿಯಾದ ವೆಂಕಟರಮಣ ದೇವರ ದೋಣಿ ವಿಹಾರವು ಕೇಣಿ ಹಳ್ಳದಲ್ಲಿ ಶುಕ್ರವಾರ ಸಡಗರದಿಂದ ನಡೆಯಿತು.

ಪ್ರತಿವರ್ಷ ದೊಡ್ಡ ತೇರು ಉತ್ಸವದ ನಂತರ ಮಾರನೇ ದಿನ ವೆಂಕಟರಮಣ ದೇವರು ದೋಣಿ ವಿಹಾರಕ್ಕೆ ತೆರಳುವ ಪದ್ಧತಿ ಇದೆ.

ಪಲ್ಲಕ್ಕಿ ಮೂಲಕ ವೆಂಕಟರಮಣ ದೇವಸ್ಥಾನದಿಂದ ಹೊರಟು ಬೇಳಾಬಂದರ ಬಳಿ ಕಟ್ಟೆಯ ಮೇಲೆ ಇಡಲಾಗುತ್ತದೆ. ನಂತರ ಧ್ವನಿವರ್ಧಕ, ತಳಿರು ತೋರಣಗಳಿಂದ ಸಿಂಗಾರಗೊಂಡ ದೋಣಿಯ ಮೂಲಕ ವಿಹಾರಕ್ಕೆ ತೆರಳುತ್ತದೆ. ದಡಕ್ಕೆ ವಾಪಸ್ ಬಂದ ನಂತರ ಸುತ್ತಮುತ್ತಲಿನ ಗ್ರಾಮಸ್ಥರು ಅಲ್ಲಿಗೆ ಬಂದು ದೇವರಿಗೆ ಪೂಜೆ ಮಾಡುತ್ತಾರೆ.

ಪಲ್ಲಕ್ಕಿ ಮೂಲಕ ಪುನಃ ವೆಂಕಟರಮಣ ದೇವಸ್ಥಾನಕ್ಕೆ ಬರುವ ಸಮಯದಲ್ಲಿ ರಸ್ತೆಯುದ್ದಕ್ಕೂ ತಳಿರು ತೋರಣ ರಂಗೋಲಿಯನ್ನು ಹಾಕಿ ಅಕ್ಕಪಕ್ಕದ ಮನೆಯವರು ಪೂಜೆ ಸಲ್ಲಿಸಿದರು. ದೋಣಿ ವಿಹಾರಕ್ಕೆ ಬರುವ ಎಲ್ಲರಿಗೂ ವೆಂಕಟರಮಣ ನಾಯ್ಕ ಕುಟುಂಬದವರು ತಮ್ಮ ಮನೆಯಲ್ಲಿ ಪ್ರತಿವರ್ಷದಂತೆ ಪಾನಕ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-20-720442356

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.