ಶಿರಸಿ: ವರ್ಷಗಳಿಂದ ಭಾಗಶಃ ಸ್ಥಿರತೆಯ ಹಾದಿಯಲ್ಲಿದ್ದ ಅಡಿಕೆ ಮಾರುಕಟ್ಟೆಯಲ್ಲಿ ಈಗ ದಿಢೀರ್ ಕುಸಿತದ ಪರ್ವ ಆರಂಭವಾಗಿದ್ದು, ಮಳೆಗಾಲದ ಸಿದ್ಧತೆಯಲ್ಲಿರುವ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.

ಶಿರಸಿ ಅಡಿಕೆ ಮಾರುಕಟ್ಟೆಯಲ್ಲಿ ಕೇವಲ ಒಂದು ವಾರದ ಅವಧಿಯಲ್ಲಿಯೇ ಎಲ್ಲ ವಿಧದ ಅಡಿಕೆಗಳ ಧಾರಣೆಯಲ್ಲಿ ಕ್ವಿಂಟಲ್ಗೆ ₹1 ಸಾವಿರದಿಂದ ₹2 ಸಾವಿರದವರೆಗೆ ಇಳಿಕೆ ಕಂಡುಬಂದಿದೆ. ಇದು ದಿನದಿಂದ ದಿನಕ್ಕೆ ಮತ್ತಷ್ಟು ಇಳಿಯುತ್ತಿರುವುದು ಈಗ ಆತಂಕಕ್ಕೆ ಕಾರಣವಾಗಿದೆ.

ಕಳೆದ ವರ್ಷದ ಮೇ ತಿಂಗಳಿಗೆ ಹೋಲಿಸಿದರೆ ಈ ಬಾರಿ ಹೊರ ರಾಜ್ಯಗಳ ಮಾರುಕಟ್ಟೆಯಿಂದ ಅಡಿಕೆಗೆ ಇರುವ ಬೇಡಿಕೆ ಶೇ. 35ರಿಂದ 40ರಷ್ಟು ತಗ್ಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸುಮಾರು 30 ಸಾವಿರ ಕ್ವಿಂಟಲ್ ಅಡಿಕೆ ಹೊರ ರಾಜ್ಯಗಳಿಗೆ ರಫ್ತಾಗಿತ್ತು. ಆದರೆ ಈ ಬಾರಿ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಮಾರುಕಟ್ಟೆಯ ಬೇಡಿಕೆಯಷ್ಟು ಪೂರೈಕೆಯಿಲ್ಲ. ಆದಾಗ್ಯೂ ದರ ಏರಿಕೆ ಆಗುವ ಬದಲಾಗಿ ಇಳಿಕೆ ಆಗುತ್ತಿರುವುದು ಮಾರುಕಟ್ಟೆಯ ಸಹಜ ಏರಿಳಿತವೇ ಅಥವಾ ವ್ಯಾಪಾರಿ ವಲಯದ ವ್ಯವಸ್ಥಿತ ತಂತ್ರಗಾರಿಕೆಯೇ ಎಂಬ ಅನುಮಾನ ರೈತಾಪಿ ವಲಯದಲ್ಲಿ ದಟ್ಟವಾಗುತ್ತಿವೆ.

‘ಪ್ರಸ್ತುತ ಮೇ ತಿಂಗಳು ಮುಗಿಯುತ್ತಾ ಬಂದಿದ್ದು, ರೈತರು ಮಳೆಗಾಲದ ಕೃಷಿ ಸಿದ್ಧತೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತೋಟಗಳಿಗೆ ಬೋರ್ಡೋ ದ್ರಾವಣ ಸಿಂಪಡಣೆ, ಗೊಬ್ಬರ ಖರೀದಿ ಮತ್ತು ಕಾರ್ಮಿಕರ ಕೂಲಿಗಾಗಿ ದೊಡ್ಡ ಮೊತ್ತದ ಹಣದ ಅಗತ್ಯವಿದೆ. ಇದರೊಂದಿಗೆ ಜೂನ್ ಆರಂಭದಲ್ಲಿ ಶಾಲಾ-ಕಾಲೇಜುಗಳು ಪುನರಾರಂಭ ಆಗುತ್ತಿರುವುದರಿಂದ ಮಕ್ಕಳ ಶೈಕ್ಷಣಿಕ ಶುಲ್ಕ ಪಾವತಿಸಬೇಕಾದ ಅನಿವಾರ್ಯತೆಯೂ ಪೋಷಕರ ಮೇಲಿದೆ. ಇಂತಹ ಅತಿ ಹೆಚ್ಚು ಖರ್ಚಿನ ದಿನಗಳಲ್ಲೇ ರೈತರು ಅಡಿಕೆ ಮಾರಾಟ ಮಾಡಿ ಹಣ ಹೊಂದಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಇಂತಹ ಹೊತ್ತಿನಲ್ಲೇ ಬೆಲೆ ಇಳಿದಿರುವುದು ರೈತ ಸಮುದಾಯಕ್ಕೆ ಆರ್ಥಿಕ ನಷ್ಟಕ್ಕೆ ಕಾರಣವಾಗಿದೆ. ುಂಬರುವ ದಿನಗಳಲ್ಲಿ ದರ ಮತ್ತಷ್ಟು ಕುಸಿದರೆ ತೋಟಗಳ ನಿರ್ವಹಣೆ ಮಾಡುವುದು ಹೇಗೆ ಎಂಬ ಕಳವಳ ತೋಟಗಾರರನ್ನು ಕಾಡುತ್ತಿದೆ’ ಎನ್ನುತ್ತಾರೆ ಅಡಿಕೆ ಕೃಷಿಕ ರಾಮಕೃಷ್ಣ ಭಟ್.

ಬರ್ಮಾ, ಇಂಡೋನೇಶಿಯಾದಂತಹ ದೇಶಗಳಿಂದ ಕಳ್ಳ ಮಾರ್ಗದ ಮೂಲಕ ದೇಶದ ಮಾರುಕಟ್ಟೆಗೆ ಅಡಿಕೆ ಲಗ್ಗೆ ಇಡುತ್ತಿರುವುದೇ ಈ ದರ ಇಳಿಕೆಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ‘ಉತ್ತರ ಪ್ರದೇಶ, ಗುಜರಾತ್ನಂತಹ ದೇಶದ ಬೃಹತ್ ಬೇಡಿಕೆಯುಳ್ಳ ರಾಜ್ಯಗಳಿಗೆ, ನಮ್ಮ ದೇಶಿ ದರಕ್ಕಿಂತ ಶೇ.20ರಷ್ಟು ಕಡಿಮೆ ಬೆಲೆಗೆ ಈ ವಿದೇಶಿ ಅಡಿಕೆ ಲಭ್ಯವಾಗುತ್ತಿದೆ. ಹೀಗಾಗಿ ಅಲ್ಲಿನ ವ್ಯಾಪಾರಿಗಳು ಸ್ಥಳೀಯ ಅಡಿಕೆ ಖರೀದಿಯಿಂದ ಹಿಂದೆ ಸರಿಯುತ್ತಿರುವುದು ದರ ಇಳಿಕೆಗೆ ಕಾರಣ’ ಎನ್ನುತ್ತಾರೆ ಟಿಎಂಎಸ್ ಮುಖ್ಯ ಕಾರ್ಯನಿರ್ವಾಹಕ ವಿನಯ ಹೆಗಡೆ.

‘ದರ ತೀರಾ ಇಳಿಯದಂತೆ ಟಿಎಂಎಸ್, ಟಿಎಸ್ಎಸ್, ಕ್ಯಾಂಪ್ಕೊ ಆದಿಯಾಗಿ ಎಲ್ಲ ಸಹಕಾರ ಸಂಘಗಳು ನಿರಂತರವಾಗಿ ಖರೀದಿಯಲ್ಲಿ ತೊಡಗಿವೆ. ಆದರೆ ನಮಗೂ ಹೊರಗಿನ ಬೇಡಿಕೆ ಬಂದರಷ್ಟೇ ಹೆಚ್ಚಿನ ದರಕ್ಕೆ ಖರೀದಿಸಲು ಸಾಧ್ಯ. ಆದರೂ ಇಂಥ ಸಂದಿಗ್ದ ಪರಿಸ್ಥಿತಿಯಲ್ಲಿ ದರ ಸ್ಥಿರತೆಗೆ
ಪ್ರಯತ್ನಿಸಲಾಗುತ್ತಿದೆ’ ಎನ್ನುತ್ತಾರೆ ಅವರು.

ವಾರದಿಂದ ದರ ಇಳಿಕೆ

ಶಿರಸಿ ಮಾರುಕಟ್ಟೆಯಲ್ಲಿ ಪ್ರಸ್ತುತ ಬಿಳಿಗೋಟು ಕ್ವಿಂಟಲ್ಗೆ ಕನಿಷ್ಠ ₹23,000 ರಿಂದ ಗರಿಷ್ಠ ₹36,599 ದರವಿದ್ದರೆ, ಬೆಟ್ಟೆ ಅಡಿಕೆಗೆ ಕನಿಷ್ಠ ₹35,199 ರಿಂದ ಗರಿಷ್ಠ ₹49,169 ವರೆಗೆ ವ್ಯಾಪಾರವಾಗುತ್ತಿದೆ. ಇನ್ನು ರಾಶಿ ಅಡಿಕೆ ಕನಿಷ್ಠ ₹49,499 ರಿಂದ ಗರಿಷ್ಠ ₹52,989 ಹಾಗೂ ಚಾಲಿ ಅಡಿಕೆ ಕನಿಷ್ಠ ₹42,066 ರಿಂದ ಗರಿಷ್ಠ ₹46,639 ದರದಲ್ಲಿದೆ. ವಾರದ ಹಿಂದೆ ಇವುಗಳ ದರ ಅಂದಾಜು ₹1ರಿಂದ ₹2 ಸಾವಿರ ಹೆಚ್ಚಿತ್ತು.

ಅಡಿಕೆ ಮಾರುಕಟ್ಟೆ ಸಾಕಷ್ಟು ಏರಿಳಿತ ಕಂಡಿದೆ. ರೈತರು ಆತಂಕಪಡುವ ಅಗತ್ಯವಿಲ್ಲ. ಮುಂದಿನ 15 ದಿನಗಳಲ್ಲಿ ಮತ್ತೆ ಹಳೆಯ ದರ ಮರಳುವ ವಿಶ್ವಾಸವಿದೆ
ವಿನಯ ಹೆಗಡೆ, ಟಿಎಂಎಸ್ ಮುಖ್ಯ ಕಾರ್ಯನಿರ್ವಾಹಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.