ಶಿರಸಿ: ಬನವಾಸಿಯ ಉಮಾ ಮಧು ಕೇಶ್ವರ ದೇವರ ವಾರ್ಷಿಕ ರಥೋತ್ಸವ ಮಾರ್ಚ್ 30ರಂದು ನಡೆಯಲಿದೆ.

ಈ ಬಾರಿಯ ಉತ್ಸವದ ತಾಂತ್ರಿಕತೆಯನ್ನು ವೇ.ಮೂ.ಶ್ರೀನಿಧಿ ಮಂಗಳೂರು ಅವರು ನಿರ್ವಹಿಸುತ್ತಿದ್ದಾರೆ. ಈಗಾಗಲೇ ಮಹಾಗಣಪತಿ ಪೂಜೆ, ಅಂಕುರಾರೋಪಣ, ಧ್ವಜಾರೋಹಣ ಹಾಗೂ ಶಿಬಿಕಾಯಂತ್ರೋತ್ಸವಗಳು ಪೂರೈಸಿವೆ. ನಿತ್ಯ ಹಗಲೋತ್ಸವ, ತಿರುಗುಣಿ ತೇರು ಹಾಗೂ ವಿವಿಧ ಹೋಮ-ಹವನಗಳು ನಡೆಯುತ್ತಿದ್ದು, ಮಾರ್ಚ್ 27ರಂದು ಪುಷ್ಪ ಮಂಜರಿ ಹಾಗೂ 28ರಂದು ಸಿಂಹ ಯಂತ್ರೋತ್ಸವಗಳು ಜರುಗಲಿವೆ. 29ರ ರಾತ್ರಿ 10.30ರ ಬಳಿಕ ಮನಮೋಹಕ ಹೂವಿನ ತೇರು (ಗಜ ಯಂತ್ರೋತ್ಸವ) ನಡೆಯಲಿದೆ.

ಮಾರ್ಚ್ 30ರ ಬೆಳಿಗ್ಗೆ 11 ಗಂಟೆ ನಂತರ ಉಮಾ ಮಧುಕೇಶ್ವರ ದೇವರು ಪಲ್ಲಕ್ಕಿ ಉತ್ಸವದ ಮೂಲಕ ರಥಾರೂಢರಾಗಲಿದ್ದು, ಅಲ್ಲಿ ದೇವರ ವಿವಾಹ ಮಹೋತ್ಸವದ ಸಂಭ್ರಮ ಏರ್ಪಡಲಿದೆ.

ಮಧ್ಯರಾತ್ರಿ 11ರವರೆಗೆ ಭಕ್ತರಿಗೆ ರಥದ ಮೇಲೆ ದೇವರ ದರ್ಶನಕ್ಕೆ ಅವಕಾಶವಿದ್ದು, ತದನಂತರ ಮಹಾರಥೋತ್ಸವಕ್ಕೆ ಚಾಲನೆ ದೊರೆಯಲಿದೆ. ಮಾರ್ಚ್ 31ರಂದು ಕುಂಕುಮೋತ್ಸವ ಹಾಗೂ ಏ.1ರಂದು ಅವಭೃಥ ತೀರ್ಥಸ್ನಾನದೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.

ರಥೋತ್ಸವದ ದಿನ ಭಕ್ತರಿಗಾಗಿ ಅನ್ನಸಂತರ್ಪಣೆ ಹಾಗೂ ಲಘು ಪಾನೀಯದ ವ್ಯವಸ್ಥೆ ಮಾಡಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಬೇಕು ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸುಧಾಕರ ಹೆಮಾದ್ರಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-20-1117611169

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.