ಶಿರಸಿ: ತಾಲ್ಲೂಕಿನ ಬನವಾಸಿ ಮಧುಕೇಶ್ವರ ದೇವಸ್ಥಾನದ ದುರಸ್ತಿ ಕಾರ್ಯದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ತೋರುತ್ತಿರುವ ನಿರ್ಲಕ್ಷ್ಯದ ವಿರುದ್ಧ ಬನವಾಸಿ ನೂತನ ತಾಲ್ಲೂಕು ರಚನೆ ಹೋರಾಟ ಸಮಿತಿ ಆಕ್ರೋಶ ಹೊರಹಾಕಿದೆ. ದಶಕಗಳಿಂದ ದೇವಸ್ಥಾನ ಸೋರುತ್ತಿದ್ದರೂ, ಇಲಾಖೆಯು ಕೇವಲ ಸುಳ್ಳು ಭರವಸೆಗಳನ್ನು ನೀಡುತ್ತಾ ಭಕ್ತರನ್ನು ವಂಚಿಸುತ್ತಿದೆ ಎಂದು ಸಮಿತಿಯ ಪದಾಧಿಕಾರಿಗಳು ದೂರಿದ್ದಾರೆ.

ಹೋರಾಟ ಸಮಿತಿ ಅಧ್ಯಕ್ಷ ಉದಯಕುಮಾರ ಕಾನಳ್ಳಿ, ಗೌರವಾಧ್ಯಕ್ಷ ಸಿ.ಎಫ್.ನಾಯ್ಕ ಮಾಳಂಜಿ ಹಾಗೂ ಕಾರ್ಯದರ್ಶಿ ವಿಶ್ವನಾಥ ವಡೆಯರ ಜಂಟಿ ಹೇಳಿಕೆ ನೀಡಿ, ಇಲಾಖೆಯ ವಿಫಲತೆಯನ್ನು ಖಂಡಿಸಿದ್ದಾರೆ. ‘ಬನವಾಸಿ ಜಾತ್ರೆಯ ಸಂದರ್ಭದಲ್ಲಿ ಬೃಹತ್ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದಾಗ, ಅಧಿಕಾರಿಗಳು ಸ್ಥಳಕ್ಕೆ ಬಂದು ಒಂದು ವಾರದಲ್ಲಿ ಕೆಲಸ ಆರಂಭಿಸುವುದಾಗಿ ಮೌಖಿಕ ಭರವಸೆ ನೀಡಿದ್ದರು. ಆದರೆ ಆ ಮಾತು ಈಗ ಸುಳ್ಳಾಗಿದ್ದು, ಇಲಾಖೆ ಅಧಿಕಾರಿಗಳು ಜನರ ನಂಬಿಕೆಯೊಂದಿಗೆ ಆಟವಾಡುತ್ತಿದ್ದಾರೆ. ಪೊಲೀಸ್ ಇಲಾಖೆ ಹಾಗೂ ಶಾಸಕರ ಮಧ್ಯಸ್ಥಿಕೆಗೆ ಗೌರವ ನೀಡಿ ಅಂದು ಪ್ರತಿಭಟನೆ ಕೈಬಿಡಲಾಗಿತ್ತು, ಆದರೆ ಇಲಾಖೆ ಇದನ್ನು ದುರುಪಯೋಗ ಪಡಿಸಿಕೊಂಡಿದೆ’ ಎಂದು ಕಿಡಿಹಾಕಿದ್ದಾರೆ.

‘ಮಂಜುಗುಣಿ ದೇವಸ್ಥಾನದ ಮಾದರಿಯಲ್ಲಿ ಅರ್ಧ ಚಂದ್ರಾಕೃತಿಯ ಉತ್ತಮ ಗುಣಮಟ್ಟದ ತಗಡುಗಳನ್ನು ಅಳವಡಿಸಿದರೆ ಸೋರುವಿಕೆ ತಡೆಗಟ್ಟಬೇಕು’ ಎಂದಿರುವ ಅವರು, ‘ಪ್ರಸ್ತುತ ಮಳೆ ಆರಂಭವಾಗಿದ್ದು, ದೇವಸ್ಥಾನ ಮತ್ತೆ ಸೋರುವುದು ನಿಶ್ಚಿತವಾಗಿದೆ. ಇಲಾಖೆ ಅಧಿಕಾರಿಗಳು ನೀಡಿದ ಭರವಸೆಯಂತೆ ತಕ್ಷಣ ಸರ್ವೆ ಕಾರ್ಯ ನಡೆಸಿ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದರೆ, ಮಳೆಯಲ್ಲಿಯೇ ಅರೆಬೆತ್ತಲೆ ಮೆರವಣಿಗೆ ನಡೆಸುವ ಮೂಲಕ ಇಲಾಖೆಯ ವಿಫಲತೆಯನ್ನು ಪ್ರಚಾರ ಮಾಡುವುದಾಗಿ ಸಮಿತಿ ಎಚ್ಚರಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-20-1456536607

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.