ಶಿರಸಿ: ಅನೇಕ ವರ್ಷಗಳಿಂದ ಮಳೆ ನೀರಿಗೆ ಸೋರುತ್ತಿರುವ ತಾಲ್ಲೂಕಿನ ಬನವಾಸಿಯ ಮಧುಕೇಶ್ವರ ದೇವಾಲಯದ ದುರಸ್ತಿ ಕಾರ್ಯಕ್ಕೆ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಹಸಿರು ನಿಶಾನೆ ತೋರಿದ್ದು, ಬನವಾಸಿಯಲ್ಲಿ ನಡೆದ ಸಭೆಯಲ್ಲಿ ಜೂನ್ 4ರಿಂದಲೇ ಕಾಮಗಾರಿ ನಡೆಸುವ ಭರವಸೆ ನೀಡಿದ್ದಾರೆ.

ಬುಧವಾರ ದೇವಾಲಯ ವೀಕ್ಷಿಸಿದ ಇಲಾಖೆಯ ಅಧೀಕ್ಷಕ ಎಂಜಿನಿಯರ್ ರಮೇಶ ಮೂಲಿಮನಿ ಅವರು, ಇಲಾಖೆ ಸಂರಕ್ಷಣಾ ಸಹಾಯಕ ರಾಕೇಶ ಅವರಿಗೆ ಈ ಕುರಿತು ಸೂಚಿಸಿದರು. ‘ದೇವಸ್ಥಾನದ ಮೇಲ್ಭಾಗದಲ್ಲಿ ಇನ್ನು ಮುಂದೆ ತಾಡಪತ್ರಿ ಹೊದಿಸದೇ, ಪುರಾತನ ಕಲ್ಲುಗಳಿಗೆ ಬಳಸುವ ವಿಶೇಷ ನೀರು ನಿರೋಧಕ ಪಾರದರ್ಶಕ ಲೇಪನ ಬಳಸಿ ಸೋರಿಕೆ ತಡೆಯಲಾಗುವುದು ಹಾಗೂ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಶಾಶ್ವತ ಕಾಮಗಾರಿ ಆರಂಭಿಸಲಾಗುವುದು’ ಎಂದು ತಿಳಿಸಿದರು.

ಇಲಾಖೆಯ ತಾಂತ್ರಿಕ ಉಪ ಎಂಜಿನಿಯರ್ ಕೆಂಪೇಗೌಡ ಮಾತನಾಡಿ, ‘ನಿಯಮದಂತೆ ನೈಜ ಸ್ಥಿತಿ ರಕ್ಷಿಸಿ, ಸಾಂಸ್ಕೃತಿಕ ಚಿತ್ರಕಲೆಗಳನ್ನು ಉಳಿಸುವುದು ನಮ್ಮ ಕರ್ತವ್ಯ’ ಎಂದರು.

‘ಅಧಿಕಾರಿಗಳ ಮಾತಿನ ಮೇಲೆ ನಮಗೆ ವಿಶ್ವಾಸವಿದೆ. ಒಂದು ವೇಳೆ ನುಡಿದಂತೆ ನಡೆದುಕೊಳ್ಳದಿದ್ದರೆ ಮತ್ತೆ ಪ್ರತಿಭಟನೆಯ ಬಿಸಿ ತಟ್ಟಲಿದೆ’ ಎಂದು ಬನವಾಸಿ ತಾಲ್ಲೂಕು ರಚನಾ ಹೋರಾಟ ಸಮಿತಿ ಅಧ್ಯಕ್ಷ ಉದಯಕುಮಾರ ಕಾನಳ್ಳಿ ಹೇಳಿದರು.

ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಸುಧಾಕರ ಹೇಮಾದ್ರಿ ಅವರು ಯಜ್ಞಭವನ ದುರಸ್ತಿಗೆ ಒತ್ತಾಯಿಸಿದರು.

ಪ್ರಮುಖರಾದ ಗಜಾನನ ಗೌಡ, ಡಿ. ಮಹೇಶಕುಮಾರ, ಮಧುಸೂದನ್ ಭಟ್, ವಿಶ್ವನಾಥ್ ಒಡೆಯರ್, ಸಾಯಿರಾಮ ಕಾನಳ್ಳಿ ಮಾತನಾಡಿ, ‘ಕಾಮಗಾರಿಯಲ್ಲಿ ಪಾರದರ್ಶಕತೆ ಇರಬೇಕು, ವಿಳಂಬವಾದರೆ ಪ್ರಬಲ ಹೋರಾಟ ನಿಶ್ಚಿತ’ ಎಂದು ಎಚ್ಚರಿಸಿದರು.

ಸಭೆಯ ನಂತರ ಪ್ರಮುಖರು ಚಾವಣಿಗೆ ತೆರಳಿ ಪರಿಶೀಲಿಸಿದರು. ಪ್ರಕಾಶ್ ಬಂಗ್ಲೆ, ಮಹಾಂತೇಶ ಕಂಬಾರ, ಲತಾ ಶೆಟ್ಟಿ, ಮೇಘರಾಜ ನರೇಗಲ್ ಸೇರಿದಂತೆ ಹಲವರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-20-1102825712

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.