ಕುಮಟಾ: ಬಿ.ಇಡಿ., ಅಂತಿಮ ಪರೀಕ್ಷೆಯಲ್ಲಿ ಇಲ್ಲಿಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ನಿಧಿ ದೇಶಭಂಡಾರಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಪ್ರಥಮ ರ‍್ಯಾಂಕ್ ಪಡೆದು, ಒಂದು ಶಿಷ್ಯವೇತನ ಹಾಗೂ ಐದು ಬಂಗಾರ ಪದಕ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಕಾಲೇಜಿನ ನಿನಾದ ದೇಶಭಂಡಾರಿ ತೃತಿಯ ರ‍್ಯಾಂಕ್, ರಮ್ಯಾ ಭಟ್ಟ 6ನೇ ರ‍್ಯಾಂಕ್ ಹಾಗೂ ನಯನಾ ಚಂದಾವರ 9ನೇ ರ‍್ಯಾಂಕ್ ಪಡೆದಿದ್ದಾರೆ. ವಿವಿಯ ಒಟ್ಟೂ 10 ರ‍್ಯಾಂಕ್‌ಗಳಲ್ಲಿ 4 ರ‍್ಯಾಂಕ್ ಕುಮಟಾದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯಕ್ಕೆ ಲಭಿಸಿರುವುದು ವಿಶೇಷ ಎಂದು ಪ್ರಾಚಾರ್ಯೆ ಪ್ರೀತಿ ಭಂಡಾರಕರ್ ತಿಳಿಸಿದ್ದಾರೆ.