ಶಿರಸಿ: ಬೇಡ್ತಿ ಮತ್ತು ಅಘನಾಶಿನಿ ನದಿಗಳ ಸಂರಕ್ಷಣೆಗಾಗಿ ಹಮ್ಮಿಕೊಂಡಿರುವ ಭಜನಾ ಸತ್ಯಾಗ್ರಹವು ಜನಶಕ್ತಿಯ ಜಾಗೃತಿಗೆ ಸಾಕ್ಷಿಯಾಗಿದೆ.

ಯುಗಾದಿಯಂದು ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅವರ ಚಾಲನೆಯೊಂದಿಗೆ ಆರಂಭವಾದ ಈ ವಿಶಿಷ್ಟ ಚಳವಳಿ, ಈಗ ಯಲ್ಲಾಪುರ, ಸಿದ್ದಾಪುರ, ಕುಮಟಾ ಸೇರಿದಂತೆ 92 ಸ್ಥಳಗಳಲ್ಲಿ ವ್ಯಾಪಿಸಿದೆ. ಪ್ರತಿದಿನ ಸುಮಾರು 3,440ಕ್ಕೂ ಹೆಚ್ಚು ಜನರು ಈ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುತ್ತಿದ್ದು, ನದಿ ತಿರುವು ಯೋಜನೆಗಳ ವಿರುದ್ಧ ಪ್ರಬಲ ಧ್ವನಿ ಎತ್ತಿದ್ದಾರೆ.

‘ಈ ಹೋರಾಟದಲ್ಲಿ ನಾರಿಶಕ್ತಿಯ ಪ್ರದರ್ಶನ ಎದ್ದು ಕಾಣುತ್ತಿದ್ದು, ಮಾತೃಮಂಡಳಿಗಳ ನೇತೃತ್ವದಲ್ಲಿ ಸಾಂಪ್ರದಾಯಿಕ ಹಾಗೂ ಪರಿಸರ ಕಾಳಜಿಯ ಭಜನೆಗಳು ಮೊಳಗುತ್ತಿವೆ. ಸ್ವರ್ಣವಲ್ಲಿ, ನೆಲಮಾವು ಹಾಗೂ ಶಿರಳಗಿ ಶ್ರೀಗಳ ಮಾರ್ಗದರ್ಶನದಲ್ಲಿ ಭಕ್ತಿ ಮತ್ತು ಶಕ್ತಿಯ ಸಂಗಮವಾಗಿ ಈ ಸತ್ಯಾಗ್ರಹ ರೂಪಿತಗೊಂಡಿದೆ. ವನವಾಸಿ ಮುಖಂಡರು ಹಾಗೂ ಕಲಾಕ್ಷೇತ್ರದ ಗಣ್ಯರು ಈ ಅಭಿಯಾನಕ್ಕೆ ಸಾಥ್ ನೀಡಿದ್ದಾರೆ. ಹಳ್ಳಿ ಹಳ್ಳಿಗಳ ದೇವಾಲಯಗಳಲ್ಲಿ ನಡೆಯುತ್ತಿರುವ ಈ ಭಜನಾ ಘೋಷಣೆಯಿಂದಾಗಿ ನದಿ ಜೋಡಣಾ ಇಲಾಖೆಯ ಅಧಿಕಾರಿಗಳು ಸರ್ವೇ ಕಾರ್ಯಕ್ಕೆ ಬರಲು ಹಿಂದೇಟು ಹಾಕುವಂತಾಗಿದೆ’ ಎಂದು ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಅಶೀಸರ ತಿಳಿಸಿದ್ದಾರೆ.

‘ಕೇವಲ ಪ್ರತಿಭಟನೆಯಾಗಿ ಉಳಿಯದೆ ಪಾದಯಾತ್ರೆ, ಬೀದಿ ನಾಟಕ, ಯಕ್ಷಗಾನ ಹಾಗೂ ಪತ್ರ ಚಳವಳಿಯ ಮೂಲಕ ಈ ಆಂದೋಲನ ವಿಕೇಂದ್ರೀಕೃತಗೊಂಡಿದೆ. ಮದುವೆ ಸಮಾರಂಭಗಳಲ್ಲೂ ಪರಿಸರ ಉಳಿಸಿ ಎಂಬ ಕಹಳೆ ಮೊಳಗುತ್ತಿರುವುದು ವಿಶೇಷ. ಗಾಂಧೀಜಿಯವರ ಉಪವಾಸ ಸತ್ಯಾಗ್ರಹದ ಮಾದರಿಯಲ್ಲಿರುವ ಈ ಭಜನಾ ಸತ್ಯಾಗ್ರಹವು ಜಿಲ್ಲೆಯ ಪರಿಸರ ಕಾಳಜಿಯನ್ನು ಜಗತ್ತಿಗೆ ಸಾರುತ್ತಿದೆ’ ಎಂದು ಅವರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-20-158994136

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.