ಭಟ್ಕಳ: ‘ಬೆಳಕೆ ದುರ್ಗಾಪಮೇಶ್ವರಿ ಕ್ಷೇತ್ರವು ಪ್ರವರ್ಧಮಾನಕ್ಕೆ ಬರಲು ಬಿಲ್ಲವ, ಬಲ್ಲವರು, ಮಠ ಹಾಗೂ ಹವ್ಯಕ ಮಹಾಸಭೆಗಳು ವಿಶೇಷ ಕಾರಣಗಳಾಗಿವೆ’ ಎಂದು ಗೋಕರ್ಣದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ಅಖಿಲ ಹವ್ಯಕ ಮಹಾಸಭಾದ ಶ್ರೀಕ್ಷೇತ್ರ ಬೆಳಕೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ನಿರ್ಮಿಸಲಾದ ಹವ್ಯಕ ಭವನವನ್ನು ಶನಿವಾರ ಲೋಕಾರ್ಪಣೆ ಮಾಡಿ ಮಾತನಾಡಿದರು.

‘ಅಖಿಲ ಹವ್ಯಕ ಮಹಾಸಭೆಯ ವತಿಯಿಂದ ಉತ್ತಮ ಸಭಾಭವನ ನಿರ್ಮಾಣ ಮಾಡಿದ್ದು, ಈ ಭಾಗದ ಜನತೆಗೆ ಅನುಕೂಲವಾಗಲಿದೆ. ಜೊತೆಗೆ ಎರಡು ಕೊಠಡಿಗಳನ್ನು ನಿರ್ಮಾಣ ಮಾಡಿ ದೂರ ದೂರದಿಂದ ಮಠಕ್ಕೆ ಬರುವ ಭಕ್ತರಿಗೆ ಅರವಟ್ಟಿಗೆ ಮಾಡಿಕೊಡುವ ವಿಚಾರ ಸ್ವಾಗತಾರ್ಹವಾಗಿದೆ’ ಎಂದರು.

‘ಈ ಭಾಗದ ಅಭಿವೃದ್ಧಿಗೆ ಸಚಿವ ಮಂಕಾಳ ವೈದ್ಯರು ದೊಡ್ಡ ಶಕ್ತಿಯಾಗಿದ್ದಾರೆ. ಸಮರ್ಪಣಾ ಭಾವದಿಂದ ಮಠಕ್ಕೆ ಸದಾ ಆಗಮಿಸುವ ಅವರು ಹೇಳಿದ್ದನ್ನು ಮಾಡಿಕೊಟ್ಟಿದ್ದಾರೆ. ಮಠದಿಂದ ಅನೇಕ ಬಾರಿ ಸಲಹೆ, ಸೂಚನೆಗಳನ್ನು ಪಡೆದುಕೊಂಡಿದ್ದಾರೆ’ ಎಂದರು.

‘ಅಖಿಲ ಹವ್ಯಕ ಮಹಾಸಭಾ ಗಿರಿಧರ ಕಜೆಯವರ ಅಧ್ಯಕ್ಷತೆಯಲ್ಲಿ ಸರ್ವರ ಮಹಾಸಭೆಯಾಗಿ ಮಾರ್ಪಟ್ಟಿದ್ದು ಇನ್ನೂ ಹೆಚ್ಚಿನ ಕಾರ್ಯ ಮಾಡಲಿ’ ಎಂದೂ ಶ್ರೀಗಳು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಖಿಲ ಹವ್ಯಕ ಮಹಾಸಭೆಯ ಅಧ್ಯಕ್ಷ ಡಾ. ಗಿರಿಧರ ಕಜೆ ಮಾತನಾಡಿ, ‘ಈ ಭಾಗದ ಜನತೆಯ ಉಪಯೋಗಕ್ಕಾಗಿ ಭವ್ಯ ಸಭಾಭವನ ನಿರ್ಮಾಣ ಮಾಡಲಾಗಿದ್ದು, ಒಂದು ಸಾವಿರ ಜನರಿಗೆ ಕುಳಿತುಕೊಳ್ಳವ ವ್ಯವಸ್ಥೆ ಕಲ್ಪಿಸಲಾಗಿದೆ. 8 ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ಇನ್ನೆರಡು ಕೊಠಡಿಗಳನ್ನು ನಿರ್ಮಾಣ ಮಾಡಿ ದೂರದಿಂದ ಮಠಕ್ಕೆ ಬರುವವರಿಗೆ ತಂಗುವುದಕ್ಕೆ ವ್ಯವಸ್ಥೆ ಮಾಡುವ ಇಚ್ಚೆಯಿದೆ’ ಎಂದರು.

ಸಚಿವ ಮಂಕಾಳ ವೈದ್ಯ ಮಾತನಾಡಿ, ‘ಅಖಿಲ ಹವ್ಯಕ ಮಹಾಸಭಾದವರು ಒಂದು ಉತ್ತಮ ಭವನ ನಿರ್ಮಾಣ ಮಾಡಿದ್ದಾರೆ. ಬೆಂಗಳೂರಿನ ಅಖಿಲ ಹವ್ಯಕ ಮಹಾಸಭಾ ಕರಾವಳಿ ಭಾಗಕ್ಕೆ ತಮ್ಮ ಸೇವೆಯನ್ನು ವಿಸ್ತರಿಸಿರುವುದು ಈ ಭಾಗದ ಜನತೆಗೆ ಅನುಕೂಲವಾಗಲಿದೆ. ಮಹಾಸಭಾದ ಅಧ್ಯಕ್ಷರು ದೂರ ಪ್ರಯಾಣಿಕರಿಗೆ ವಿಶ್ರಾಂತಿಗಾಗಿ ಕೊಠಡಿ ನಿರ್ಮಾಣ ಮಾಡುವ ಭರವಸೆ ನೀಡಿದ್ದಾರೆ. ಆದರೆ ಇಲ್ಲಿಗೆ ಬಂದವರು ಕೇವಲ ವಿಶ್ರಾಂತಿ ಮಾತ್ರವಲ್ಲ, ಊಟ-ಉಪಚಾರವನ್ನೂ ಪಡೆಯುವಂತೆ ವ್ಯವಸ್ಥೆ ಮಾಡುವಲ್ಲಿ ಸಹಕರಿಸುವುದಾಗಿ ಭರವಸೆ ನೀಡಿದರು.

ಪ್ರಮುಖರಾದ ಮೋಹನ ಭಾಸ್ಕರ ಹೆಗಡೆ, ಕೊಂಡದಕುಳಿ ರಾಮಚಂದ್ರ ಹೆಗಡೆ ಮಾತನಾಡಿದರು. ಮಹಾಸಭಾದ ಆದಿತ್ಯ, ಮಹಾಸಭಾದ ಅಧ್ಯಕ್ಷ ಗಿರಿಧರ ಕಜೆ, ಕಾರ್ಯದರ್ಶಿ ಪ್ರಶಾಂತ ಭಟ್ಟ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-20-246628349

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.