ಭಟ್ಕಳ: ತಾಲ್ಲೂಕಿನ ನೀರಕಂಠ–ಶಿರಾಲಿ ಭಾಗದ ರೈತರ ದಶಕಗಳ ಬೇಡಿಕೆಗೆ ಕೊನೆಗೂ ಸರ್ಕಾರ ಅಸ್ತು ಎಂದಿದೆ. ಕಡವಿನಕಟ್ಟಾ ಭೀಮಾ ನದಿಯಿಂದ ನೀರಕಂಠ ಶಿರಾಲಿ ತನಕ ಕಾಲುವೆ ನಿರ್ಮಾಣಕ್ಕೆ ₹6 ಕೋಟಿ ಅನುದಾನ ಬಿಡುಗಡೆ ಮಾಡಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಶಿರಾಲಿ, ನೀರಕಂಠ ಗ್ರಾಮಗಳಲಿ ನೂರಾರು ಎಕರೆ ಕೃಷಿ ಭೂಮಿಗಳಿವೆ. ಇಲ್ಲಿನ ರೈತರು ಭತ್ತದ ಕೃಷಿ ಜೊತೆಗೆ ಶೇಂಗಾ ಇನ್ನಿತರ ಉಪಕೃಷಿಗಳನ್ನು ಬೇಸಾಯ ಮಾಡಿ ಜೀವನ ಸಾಗಿಸುತ್ತಾರೆ. ಹಲವರು ಇಲ್ಲಿ ಮಲ್ಲಿಗೆ ಕೃಷಿ ಕೂಡ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ.

ಈ ಭಾಗದ ರೈತರು ಕೃಷಿ ಭೂಮಿಗಳ ಬೇಸಾಯಕ್ಕೆ ಕಡವಿನಕಟ್ಟಾ ಭೀಮಾ ನದಿಯ ನೀರನ್ನೆ ಅವಲಂಭಿಸಿದ್ದಾರೆ. ಈ ಮೊದಲು ಇದ್ದಂತಹ ಕಾಲುವೆ ಸಂಪೂರ್ಣವಾಗಿ ಶಿಥಿಲಾವಸ್ಥೆಗೊಂಡಿರುವ ಕಾರಣ ಗದ್ದಗಳಿಗೆ ನೀರು ಹಾಯಿಸಲು ಕಷ್ಟಸಾಧ್ಯವಾಗಿತ್ತು. ಕಾಲುವೆಯಲ್ಲಿ ಅಲ್ಲಲ್ಲಿ ಬೃಹತ್ ಗಾತ್ರದ ರಂಧ್ರ ಇರುವ ಕಾರಣ ನೀರು ಮುಂದೆ ಸಾಗುತ್ತಿರಲಿಲ್ಲ. ಬೇಸಿಗೆಯಲ್ಲಿ ಕೃಷಿ ಮಾಡುವಾಗ ರೈತರು ಈ ಕಾಲುವೆ ಮೂಲಕ ನೀರನ್ನು ಹಾಯಸುವುದೇ ಒಂದು ಸಾಹಸವಾಗಿತ್ತು. ಗದ್ದೆಗಳಿಗೆ ಸಮರ್ಪಕ ನೀರು ಹಾಯಿಸಲು ಸಾಧ್ಯವಾಗದ ಕಾರಣ ರೈತರು ಮಳೆಗಾಲದಲ್ಲಿ ಮಾತ್ರ ಭತ್ತದ ಕೃಷಿ ಮಾಡಿ ಉಳಿದ ಸಮಯ ಪಾಳು ಬೀಡುವ ಸ್ಥಿತಿ ಇತ್ತು.

ಕಳೆದ ಕೆಲವು ವರ್ಷಗಳಿಂದ ಪ್ರತಿ ಬಾರಿಯೂ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಕಾಲುವೆ ನಿರ್ಮಾಣಕ್ಕೆ ಆಗ್ರಹಿಸುತ್ತಿದ್ದೇವು. ಆದರೆ ಈ ಬಾರಿ ಸಚಿವ ಮಂಕಾಳ ವೈದ್ಯ ಅವರು ಆಸಕ್ತಿ ತೋರಿಸಿ ₹6 ಕೋಟಿ ಮೊತ್ತದ ಕಾಲುವೆ ನಿರ್ಮಾಣಕ್ಕೆ ಮುಂದಾಗಿರುವುದು ಸಂತಸ ತರಿಸಿದೆ. ವರ್ಷಪೂರ್ತಿ ಈ ಕಾಲವೆ ಮೂಲಕ ನೀರು ದೊರೆತರೆ ಈ ಭಾಗದ ರೈತರು ಇನ್ನಷ್ಟು ಬೆಳೆ ತೆಗೆಯಲು ಅನುಕೂಲವಾಗುತ್ತದೆ ಎನ್ನುತ್ತಾರೆ ಸ್ಥಳೀಯ ರೈತರಾದ ಮಾದೇವ ನಾಯ್ಕ.

’ನಾನು ಪ್ರಥಮ ಬಾರಿ ಸಚಿವನಾದ ಮೇಲೆ ಈ ಭಾಗದ ರೈತರು ಕಾಲವೆ ನಿರ್ಮಿಸುವಂತೆ ಹಾಗೂ ನದಿಯ ಹೂಳೆತ್ತುವಂತೆ ಮನವಿ ಮಾಡಿದ್ದರು. ₹6 ಕೋಟಿ ವೆಚ್ದದಲ್ಲಿ 1.5 ಕಿ.ಮಿ. ಕಾಲುವೆ ನಿರ್ಮಾಣಕ್ಕೆ ಅನುದಾನ ನೀಡಿದ್ದೇನೆ. ನದಿಯ ಹೂಳೆತ್ತಿ, ಹೊಸ ಆಣೆಕಟ್ಟು ನಿರ್ಮಿಸಲು ಪ್ರಸ್ತಾವ ಸರ್ಕಾರದ ಸಲ್ಲಿಸಿದ್ದು, ಅನುದಾನ ಬಿಡುಗಡೆಯಾಗಲಿದೆ’ ಎಂದು ಸಚಿವ ಮಂಕಾಳ ವೈದ್ಯ ಪ್ರಜಾವಾಣೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.