ಭಟ್ಕಳ: ಪಟ್ಟಣದ ಗುರು ಸುಧೀಂದ್ರ ಕಾಲೇಜಿನ ಬಿಬಿಎ ವಿಭಾಗವು ಈಚೆಗೆ ಆಯೋಜಿಸಿದ್ದ ಬಿಜ್ ಲೀಡ್ ಎಕ್ಸ್ 2025-26 ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆಯು ಸಂಭ್ರಮದಿಂದ ನಡೆಯಿತು.

ಬಿಬಿಎ ವಿದ್ಯಾರ್ಥಿಗಳ ಕೌಶಲ, ನಾಯಕತ್ವ ಮತ್ತು ವ್ಯವಹಾರ ತಂತ್ರಜ್ಞಾನವನ್ನು ಉತ್ತೇಜಿಸುವ ಉದ್ದೇಶದೊಂದಿಗೆ ಸ್ಪರ್ಧೆ ಆಯೋಜಿಸಲಾಗಿತ್ತು. ಒಟ್ಟು 44 ವಿದ್ಯಾರ್ಥಿಗಳಿದ್ದ ಈ ಸ್ಪರ್ಧೆಯಲ್ಲಿ, 6 ಸುತ್ತುಗಳ ಮೂಲಕ ಉತ್ತಮ ಸಾಧನೆ ಮಾಡಿದ 8 ವಿದ್ಯಾರ್ಥಿಗಳನ್ನು ಗ್ರ್ಯಾಂಡ್ ಫಿನಾಲೆಗೆ ಆಯ್ಕೆ ಮಾಡಲಾಗಿತ್ತು.

ಕುಮಟಾದ ನಿರ್ಮಲ ಪಿ.ಯು.ಕಾಲೇಜಿನ ಇಂಗ್ಲಿಷ್ ಉಪನ್ಯಾಸಕಿ ಜೇನ್ ರೋಡ್ರಿಗಿಸ್ ಮತ್ತು ಬೆಂಗಳೂರಿನ ಸ್ಟ್ರೀಟ್ ಸ್ಟೇಟ್ ಗ್ಲೋಬಲ್ ಅಡ್ವೆಸರ್ ಕಂಪನಿಯ ಪ್ರಾಜೆಕ್ಟ್ ಮ್ಯಾನೇಜರ್ ನಂದೀಶ್ ಶೆಟ್ಟಿ ಜ್ಯೂರಿ ಸದಸ್ಯರಾಗಿ ಪಾಲ್ಗೊಂಡಿದ್ದರು.

ಜೇನ್ ರೋಡ್ರಿಗಿಸ್ ಮಾತನಾಡಿ, ‘ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ವ್ಯವಹಾರ ಕೌಶಲ, ತಂಡ ಕಾರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಿಸುತ್ತವೆ’ ಎಂದು ಹೇಳಿದರು.

ನಂದೀಶ್ ಶೆಟ್ಟಿ ಮಾತನಾಡಿ, ‘ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

ಕಾರ್ಯಕ್ರಮದ ಸಂಯೋಜಕರಾಗಿ ಬಿಬಿಎ ವಿಭಾಗದ ಉಪನ್ಯಾಸಕಿ ಐಶ್ವರ್ಯ ಐಗೋಡ್ ಕಾರ್ಯ ನಿರ್ವಹಿಸಿದರು. ಬಿಬಿಎ ವಿಭಾಗದ ಉಪಪ್ರಾಂಶುಪಾಲ ವಿಶ್ವನಾಥ ಭಟ್ಟ, ಪ್ರಾಂಶುಪಾಲ ಶ್ರೀನಾಥ ಪೈ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು.

ಬಿಜ್ ಲೀಡ್ ಎಕ್ಸ್ 2025-26ರ ವಿಜೇತರಾಗಿ ಸತ್ಯೇಶ ಕಾಮತ್, ಪ್ರಥಮ ರನ್ನರ್ ಅಪ್ ಆಗಿ ಶ್ರೀನಿಧಿ ಶೆಟ್ಟಿ ಹಾಗೂ ದ್ವಿತೀಯ ರನ್ಸರ್ ಅಪ್ ಆಗಿ ಶ್ರಿಯಾ ಪುರಾಣಿಕ್ ಅಯ್ಕೆಯಾದರು. ವಿಜೇತರಿಗೆ ಟ್ರೋಫಿ ಮತ್ತು ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-20-246248325

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.