ಭಟ್ಕಳ: ತಾಲ್ಲೂಕಿನಲ್ಲಿ ಶನಿವಾರ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಹಲವು ಮನೆಗಳ ಮೇಲೆ ಮರಗಳು ಬಿದ್ದು ಹಾನಿ ಸಂಭವಿಸಿದೆ.

ತಾಲ್ಲೂಕಿನ ಕೆಕ್ಕೋಡ ಗ್ರಾಮದ ನಿವಾಸಿ ಯಂಕಿ ಮಾಗ್ತು ಮರಾಠಿ ಅವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಹೆಬಳೆ ಗ್ರಾಮದ ಬಬ್ಬನಕಲ್ ಮಜಿರೆಯ ನಿವಾಸಿ ಮಾದೇವ ಮಾಸ್ತಿ ನಾಯ್ಕ ಅವರ ಮನೆಯ ಮೇಲ್ಚಾವಣಿ ಗಾಳಿಗೆ ಹಾರಿಹೋಗಿದ್ದು ಭಾಗಶಃ ಹಾನಿಯಾಗಿದೆ.

ಹೆಬಳೆ ಗ್ರಾಮದ ತೆಂಗಿನಗುಂಡಿ ಮಜಿರೆಯ ನಿವಾಸಿ ದುರ್ಗಯ್ಯ ತಿಮ್ಮಪ್ಪ ಗೊಂಡ, ಹೆಬಳೆ ಗ್ರಾಮದ ತೆಂಗಿನಗುಂಡಿ ಮಜಿರೆಯ ನಿವಾಸಿ ಯೂಸುಫ್ ಅಹಮದ್ ಇಬ್ಬು, ತಲಗೋಡ ಗ್ರಾಮದ ಕೋಟಿಮನೆ ಮಜಿರೆಯ ನಿವಾಸಿ ವಿಠ್ಠಲ ಹೊನ್ನಪ್ಪ ನಾಯ್ಕ ಅವರ ಮನೆ ಮೇಲೆ ಮರಗಳು ಬಿದ್ದು ಭಾಗಶಃ ಹಾನಿಯಾಗಿವೆ.

ತಾಲ್ಲೂಕಿನ ಶಿರಾಲಿ-2 ಗ್ರಾಮದ ಕೋಟೆಬಾಗಿಲು ಆಸ್ಪತ್ರೆ ರಸ್ತೆಯಲ್ಲಿರುವ ಸೀಮಾ ವೈನ್ಸ್ ಸೆಂಟರ್ ಎದುರು ಗಾಳಿಮಳೆಗೆ ವಿದ್ಯುತ್ ಕಂಬವೊಂದು ಬೈಕ್ ಮೇಲೆ ಬಿದ್ದ ಪರಿಣಾಮ ಮೂಡ ಶಿರಾಲಿ ನಿವಾಸಿ ವೆಂಕಟರಮಣ ಮಾಸ್ತಿ ನಾಯ್ಕ (35) ಗಾಯಗೊಂಡಿದ್ದಾರೆ.

ಸ್ಥಳೀಯರು ತಕ್ಷಣ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಲ್ಲಿಕಾನ ಕಾಯ್ಕಿಣಿ ನಿವಾಸಿ ವೆಂಕಟರಮಣ ಬೆರ್ಮ ನಾಯ್ಕ ಅವರ ನಿವಾಸಕ್ಕೆ ಹೊಂದಿಕೊಂಡಿರುವ ದನದ ಕೊಟ್ಟಿಗೆಯ ಮೇಲೆ ತೆಂಗಿನ ಮರ ಬಿದ್ದು ಕೊಟ್ಟಿಗೆಗೆ ಹಾನಿಯಾಗಿದೆ. ಶಿರಾಲಿ-1ರ ಗುಡಿಹಿತ್ತಲ ನಿವಾಸಿ ಅಬ್ದುಲ್ ಅಜೀಜ್ ಅವರ ಮನೆಯ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ.

ಮುಂಡಳ್ಳಿ ಗ್ರಾಮದ ಹಳ್ಳೆರಕೇರಿ ನಿವಾಸಿ ಸುಕ್ರಯ್ಯ ದೇವಪ್ಪ ಹಳ್ಳೇರ, ಪಟ್ಟಣದ ಮಣ್ಕುಳಿಯ ನಿವಾಸಿ ಲಕ್ಷ್ಮಿ ಕೃಷ್ಣ ನಾಯ್ಕ ಅವರ ದನದ ಕೊಟ್ಟಿಗೆಯ ಮೇಲೆ ತೆಂಗಿನ ಮರ ಬಿದ್ದು ಭಾಗಶಃ ಹಾನಿಯಾಗಿದೆ.

ಹಾನಿಗೊಳಗಾದ ಪ್ರದೇಶಗಳಿಗೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-20-972893679

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.