ಭಟ್ಕಳ: ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಭಟ್ಕಳ ಅರ್ಬನ್ ಬ್ಯಾಂಕ್ ಹತ್ತಿರದ ಸಯ್ಯದ್ ಕಾಜ್ಮಿ ಟವರ್ನಲ್ಲಿ ಮಂಗಳವಾರ ಬೆಳಕೆಯ ಪಾಂಡುರಂಗ ನಾಯ್ಕ ಆಯೋಜಿಸಿದ್ದ ನಿತ್ಯ ಹಲಸು ಮೇಳವನ್ನು ಹಿರಿಯ ಪತ್ರಕರ್ತ ರಾಧಾಕೃಷ್ಣ ಭಟ್ ಹಲಸಿನ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಲವು ಮಾವು ಸೀಸನಲ್ ಆಗಿದ್ದು, ಈಗಿನ ದಿನಗಳಲ್ಲಿ ಅವುಗಳು ದೊರೆಯುವುದೇ ಅಪರೂಪವಾಗಿದೆ. ಅದರಲ್ಲಿಯೂ ಮಾರ್ಚ್ ತಿಂಗಳಿನಲ್ಲಿಯೇ ಬೇರೆ ಬೇರೆ ರುಚಿಯ ಹಲಸಿನ ಹಣ್ಣನ್ನು ತರಿಸಿ ಭಟ್ಕಳದ ಜನತೆಗೋಸ್ಕರ ಹಲಸಿನ ಸೀಸನ್ ಮುಗಿಯುವರೆಗೂ ಮೇಳವನ್ನು ಮುಂದುವರೆಸಲಾಗುವುದು ಎಂದರು.

ನಾಯ್ಕ ಬೆಳಕೆ ಅವರ ಕಾರ್ಯ ಶ್ಲಾಘನೀಯವಾದುದು ಎಂದು ತಿಳಿಸಿದರು.

ಸಮಾಜ ಸೇವಕ ನಜೀರ್ ಕಾಶಿಮಜಿ ಮಾತನಾಡಿ, ಹಣ್ಣುಗಳಲ್ಲಿ ಹಲಸು ಮತ್ತು ಮಾವು ಎಲ್ಲರೂ ಇಷ್ಟಪಡುವಂತಹ ಹಣ್ಣುಗಳಾಗಿವೆ. ಭಟ್ಕಳದಲ್ಲಿ ಮಳೆಗಾಲದಲ್ಲಿ ಹಲಸು ಧಾರಾಳವಾಗಿ ದೊರೆತರೆ, ಪಾಂಡುರಂಗ ನಾಯ್ಕ ಅವರ ಶ್ರಮದಿಂದ ಈಗಲೇ ಹಲಸು ಲಭ್ಯವಾಗುತ್ತಿದೆ. ಭಟ್ಕಳ ನಾಗರೀಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಪ್ರಮುಖರಾದ ಅಬ್ದುಲ್ ವಾಸಿಫ್, ಲಕ್ಕಿ ಫ್ಯಾಮಿಲಿಯ ಪ್ರಮುಖರು, ರಿಜ್ವಾನ್, ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುರೇಶ ನಾಯಕ, ಹಿರಿಯ ವೈದ್ಯ ಡಾ.ಸವಿತಾ ಕಾಮತ್, ಅಬ್ದುಲ್ ಜಬ್ಬಾರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-20-1643749463

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.