ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಮೆರಿಕ ಸಮ್ಮೇಳನಕ್ಕೆ ಕಾವ್ಯಶ್ರೀ

Published 14 ಆಗಸ್ಟ್ 2024, 5:09 IST
Last Updated 14 ಆಗಸ್ಟ್ 2024, 5:09 IST
ಅಕ್ಷರ ಗಾತ್ರ

ಭಟ್ಕಳ: ತಾಲ್ಲೂಕಿನ ಬೆಸೆ ಗ್ರಾಮದ ಕಾವ್ಯಶ್ರೀ ಕುಪ್ಪಯ್ಯ ಗೊಂಡ ಅವರು ಅಮೆರಿಕನ್ ಕೆಮಿಕಲ್ ಸೊಸೈಟಿಯ ಸಮ್ಮೇಳನದಲ್ಲಿ ಪ್ರಬಂದ ಮಂಡಿಸಲು ಅಮೆರಿಕಗೆ ತೆರಳಲಿದ್ದಾರೆ.

ಆಗಸ್ಟ್ 18ರಿಂದ 22ರವರೆಗೆ ಡೆನ್ವರ್ ಕೊಲೊರಾಡೋ ಕನ್ವೆನ್ಷನ್ ಸೆಂಟರ್‌ನಲ್ಲಿ ಸಮ್ಮೇಳನ ನಡೆಯಲಿದ್ದು, ಪ್ರಪಂಚದಾದ್ಯಂತ 10 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ.

ರಾಸಾಯನ ಶಾಸ್ತ್ರಜ್ಞರು, ಎಂಜಿನಿಯರ್‌ಗಳು, ಶಿಕ್ಷಣ ತಜ್ಞರು, ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ತಾಂತ್ರಿಕ ಅವಧಿ, ವೃತ್ತಿ ಅಭಿವೃದ್ಧಿ ಅವಕಾಶ ಮತ್ತು ನೆಟ್‌ವರ್ಕಿಂಗ್ ವಿಷಯಗಳನ್ನು ಒಳಗೊಂಡಿದೆ.

ಕಾವ್ಯಶ್ರೀ ಅವರು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಆರ್.ಮದ್ದಾನಿ ಅವರ ಮಾರ್ಗದರ್ಶನದಲ್ಲಿ ರಾಸಾಯನಶಾಸ್ತ್ರದಲ್ಲಿ ಪಿ.ಎಚ್.ಡಿ. ಅಧ್ಯಯನ ಮಾಡುತ್ತಿದ್ದಾರೆ. ಭಟ್ಕಳ ಹಾಗೂ ಕುಂದಾಪುರ ನ್ಯಾಯಾಲಯದಲ್ಲಿ ದಲಾಯಿತನಾಗಿ ಸೇವೆ ಸಲ್ಲಿಸುತ್ತಿರುವ ಕುಪ್ಪಯ್ಯ ಗೊಂಡ ಹಾಗೂ ಲಕ್ಷ್ಮಿ ಗೊಂಡ ಅವರ ಪುತ್ರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT