ಭಟ್ಕಳ: ತಾಲ್ಲೂಕಿನ ಆಟೊ ರಿಕ್ಷಾ ಚಾಲಕರು ಎಲ್.ಪಿ.ಜಿ ಗ್ಯಾಸ್ ದರ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕಿದ್ದು, ತಕ್ಷಣ ದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಗುರುವಾರ ಭಟ್ಕಳ ಆಟೊ ರಿಕ್ಷಾ ಚಾಲಕರ ಸಂಘದಿಂದ ಭಟ್ಕಳ ಉಪತಹಶೀಲ್ದಾರ್ ಪ್ರವೀಣ ಅವರಿಗೆ ಮನವಿ ಸಲ್ಲಿಸಲಾಯಿತು.

ಇತ್ತೀಚಿನ ಅಂತರರಾಷ್ಟ್ರೀಯ ಪರಿಸ್ಥಿತಿಯನ್ನು ನೆಪ ಮಾಡಿಕೊಂಡು ಸ್ಥಳೀಯ ಎಲ್.ಪಿ.ಜಿ ಗ್ಯಾಸ್ ಬಂಕ್ಗಳು ಯಾವುದೇ ಸರ್ಕಾರಿ ಆದೇಶವಿಲ್ಲದೆ ದರವನ್ನು ಏರಿಕೆ ಮಾಡುತ್ತಿರುವುದು ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ಮೊದಲು ₹63 ದರದಲ್ಲಿ ಗ್ಯಾಸ್ ವಿತರಣೆ ಮಾಡಲಾಗುತ್ತಿತ್ತು. ಇದೀಗ ವಿವಿಧ ಬಂಕ್ಗಳಲ್ಲಿ ವಿಭಿನ್ನ ದರ ನಿಗದಿ ಮಾಡಲಾಗುತ್ತಿದೆ. ಅನಿಯಂತ್ರಿತ ದರ ಏರಿಕೆಯಿಂದ ದಿನನಿತ್ಯ ಜೀವನ ನಡೆಸುವುದು ಕಷ್ಟವಾಗುತ್ತಿದೆ ಎಂದರು.

ದರ ಇಳಿಕೆ ಆಗದಿದ್ದಲ್ಲಿ ಆಟೊ ಬಾಡಿಗೆ ದರ ಹೆಚ್ಚಿಸುವುದು ಅನಿವಾರ್ಯವಾಗುತ್ತದೆ. ತಾಲ್ಲೂಕಾಡಳಿ ಈ ತಕ್ಷಣ ಮಧ್ಯಪ್ರವೇಶಿಸಿ ದರ ಇಳಿಕೆ ಮಾಡಬೇಕು ಹಾಗೂ ಎಲ್ಲಾ ಬಂಕ್ಗಳಲ್ಲಿ ಒಂದೇ ದರ ನಿಗದಿ ಮಾಡಬೇಕು ಎಂದು ಭಟ್ಕಳ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ವೆಂಕಟೇಶ ನಾಯ್ಕ ಆಸರಕೇರಿ ಆಗ್ರಹಿಸಿದರು. ಗಿರೀಶ ನಾಯ್ಕ, ಲೋಕೇಶ ಆಚಾರಿ, ಮಂಜುನಾಥ ನಾಯ್ಕ, ಶ್ರೀಧರ, ಮಾದೇವ ನಾಯ್ಕ, ಸಲಿಂ ಮಹಮ್ಮದ್ ಯೂಸೂಫ್, ಲೋಕೇಶ, ಈರಪ್ಪ, ಮೊಬಿನ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-20-1146430125

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.