ಭಟ್ಕಳ: ಹಿಂದಿನ ಕಾಲದಲ್ಲಿ ಜನರು ಅಕ್ಕಿ, ಗೋಧಿ ತಿನ್ನುತ್ತಿರಲಿಲ್ಲ. ಹಾಗಾಗಿ ಕಾಯಿಲೆ ಮುಕ್ತ ಜೀವನ ನಡೆಸುತ್ತಿದ್ದರು. ಅದರೆ ಈಗ ನಾವು ತಿನ್ನುವ ಆಹಾರವೇ ನಮಗೆ ಕಾಯಿಲೆಯಾಗಿ ಕಾಡುತ್ತಿದ್ದೆ ಎಂದು ವಿಜ್ಞಾನಿ ಖಾದರ ವಲಿ ಹೇಳಿದರು.

ಪಟ್ಟಣದ ನಾಗಯಕ್ಷೆ ಸಭಾಭವನದಲ್ಲಿ ಭಾನುವಾರ ಆಹಾರವೇ ಆರೋಗ್ಯ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಪ್ರಸ್ತುತ ಸನ್ನಿವೇಶದಲ್ಲಿ ಹಳ್ಳಿ ಹಾಗೂ ಪಟ್ಟಣದ ಜನರಿಗೆ ಒಂದೇ ತರಹದ ಕಾಯಿಲೆ ಬಾಧಿಸುತ್ತಿದೆ. ಹಿಂದಿನ ಕಾಲದಲ್ಲಿ ಸಿರಿಧ್ಯಾನಗಳಲ್ಲಿರುವ ನಾರಿನಾಂಶ ಬಳಕೆಯಿಂದ ಸ್ವಸ್ಥ ಆರೋಗ್ಯ ಹೊಂದುತ್ತಿದ್ದರು. ಅದರೆ ಕಾರ್ಪೊರೇಟ್ ಕಂಪನಿಗಳು ತಮ್ಮ ಲಾಭಕ್ಕಾಗಿ ಅಕ್ಕಿ, ಗೋಧಿ ತಿನ್ನಿಸುವ ಮೂಲಕ ನಮ್ಮನ್ನು ಕಾಯಿಲೆಗೆ ದೂಡುವ ಮೂಲಕ ದೀರ್ಘಾವಧಿ ಲಾಭ ಪಡೆಯುತ್ತಿದೆ’ ಎಂದರು.

ನಾಗಯಕ್ಷೆ ಧರ್ಮಸಂಸ್ಥಾನದ ಧರ್ಮದರ್ಶಿ ರಾಮದಾಸ ಪ್ರಭು ಮಾತನಾಡಿ, ‘ಸಾವಯವ ಕೃಷಿ ಬೇಸಾಯದಿಂದ ಬೆಳೆದ ಬೆಳೆಕಾಳುಗಳು ದುಬಾರಿಯಾದರೂ ಕಲಬೆರಕೆ ಮುಕ್ತವಾಗಿರುತ್ತದೆ. ಇಂದು ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ರೆಡಿಮೇಡ್ ಆಹಾರಗಳು ವಿಷ ಪದಾರ್ಥವಾಗಿವೆ. ಆರೋಗ್ಯಕರ ಜೀವನ ನಡೆಸಲು ವಿಷಯುಕ್ತ ಆಹಾರ ಪದಾರ್ಥಗಳನ್ಮು ತ್ಯಜಿಸಬೇಕು’ ಎಂದರು.

ಯೋಗಗುರು ಗೋವಿಂದ ಗುರೂಜಿ, ಡಾ.ಸುನೀಲ ಜತ್ತಣ್ಣ, ಪ್ರಕಾಶ ಹೊಳ್ಳೆರಿ ಹಾಗೂ ಆಹಾರ ತಜ್ಞೆ ಅರುಣಾ ತಿಮ್ಮಾಪುರ ಅವರನ್ನು ಸನ್ಮಾನಿಸಲಾಯಿತು. ಅಹಾರ ತಜ್ಞೆ ಅರುಣಾ ತಿಮ್ಮಾಪುರ, ಸ್ಪಂದನಾ ಚಾರಿಟಬಲ್ ಅಧ್ಯಕ್ಷ ರಾಘವೆಂದ್ರ ನಾಯ್ಕ, ಕಿರಣ ಕಾತ್ಕಿಣಿ, ಕ್ರಿಯಾಶೀಲ ಗೆಳೆಯರ ಸಂಘದ ಅಧ್ಯಕ್ಷ ರಮೇಶ ಖಾರ್ವಿ, ನಿತಿನನಾಯ್ಕ, ಸರ್ಪನಕಟ್ಟೆ ಸ್ಪೋರ್ಟ್ಸ ಕ್ಲಬ್ ಅಧ್ಯಕ್ಷ ವಾಸು ನಾಯ್ಕ, ಸ್ವಾಮಿ ವಿವೇಕಾನಂದ ಚಾರಿಟಬಲ್ ಅಧ್ಯಕ್ಷ ವಸಂತ ನಾಯ್ಕ ಜಾಲಿ, ಜಯರಾಜ ಮೊಗೇರ, ವಿಷ್ಣು ನಾಯ್ಕ, ಭಟ್ಕಳ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎನ್.ನಾಯ್ಕ, ಕನ್ಮಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ನಾಯ್ಕ, ಮೆಸ್ಕಾಂ ಎಂಜಿನಿಯರ್ ಶಿವಾನಂದ ನಾಯ್ಕ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-20-1056089385

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.