ಭಟ್ಕಳ: ನಂಬಿಕೆಯಿಂದ ನೀಡಿದ ದುಬಾರಿ ಮೊಬೈಲ್ನ ಹಣ ಕೇಳಿದರೆ ಖಾಸಗಿ ಫೋಟೊ ಹಾಗೂ ವಿಡಿಯೊಗಳನ್ನು ಜಾಲತಾಣದಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಿದ ಪ್ರಕರಣ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

‘2025ರಲ್ಲಿ ಸ್ಥಳೀಯ ಸಂಗೀತಾ ಮೊಬೈಲ್ ಮಳಿಗೆಯಲ್ಲಿ ₹75 ಸಾವಿರ ಮೌಲ್ಯದ ಐಫೋನ್ 16 ಖರೀದಿಸಿದ್ದೆ. ಅದಕ್ಕೆ ಸಾಲದ ಕಂತೂ ಪಾವತಿಸುತ್ತಿದ್ದೆ. ನಾಲ್ಕು ತಿಂಗಳ ಹಿಂದೆ ಮಹಮದ್ ಆಶೀಲ್ ಎಂಬಾತ, ‘ಮೊಬೈಲ್ ನೀಡಿದರೆ ನಂತರ ಹಣ ಕೊಡುತ್ತೇನೆ’ ಎಂದು ಹೇಳಿ ಪಡೆದುಕೊಂಡಿದ್ದಾನೆ. ಹಣ ಕೊಡದೆ ತಪ್ಪಿಸಿಕೊಳ್ಳುತ್ತ ಬಂದಿದ್ದಾನೆ’ ಎಂದು ಗತಫಾನ್ ಅಹ್ಮದ್ ಎಂಬವರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

‘ಫೆ.26ರಂದು ಮಹಮದ್ ಆಶೀಲ್ ದುಬೈಗೆ ತೆರಳಿದ್ದು, ಫೋನ್ ಮೂಲಕ ಸಂಪರ್ಕಿಸಿದಾಗ, ‘ಹಣ ಕೊಡಲ್ಲ, ಏನು ಬೇಕಾದರೂ ಮಾಡು’ ಎಂದು ಹೇಳಿದ್ದಾನೆ. ಹಣ ಕೇಳಿದರೆ ನಿನ್ನ ಹಾಗೂ ಹೆಂಡತಿಯ ಖಾಸಗಿ ಫೋಟೊ, ವಿಡಿಯೊಗಳನ್ನು ಬೇರೆಯವರಿಗೆ ಕಳಿಸುವುದಾಗಿ ಬೆದರಿಸಿ, ನಿಂದಿಸಿದ್ದಾನೆ’ ಎಂದು ತಿಳಿಸಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-20-441928411

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.