ಭಟ್ಕಳ: ಹೆದ್ದಾರಿ ಕಾಮಗಾರಿಗಾಗಿ ತೆರವು ಮಾಡಲಿರುವ ಪಟ್ಟಣದ ನವಾಯತ್ ಕಾಲೊನಿಯಲ್ಲಿರುವ ಮೂರಿನಕಟ್ಟೆಯನ್ನು ಪುನಃ ಅದೇ ಸ್ಥಳದಲ್ಲಿ ಸ್ಥಾಪಿಸುವಂತೆ ಆಗ್ರಹಿಸಿ ಗುರುವಾರ ಹಿಂದೂ ಜಾಗರಣಾ ವೇದಿಕೆಯರು ಹಾಗೂ ಸ್ಥಳೀಯರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಿಂದೂ ಜಾಗರಣಾ ವೇದಿಕೆಯ ಕಾರ್ಯದರ್ಶಿ ನಾಗೇಶ ನಾಯ್ಕ ತೆಂಗಿನಗುಂಡಿ, ಹೆದ್ದಾರಿಗಾಗಿ ತೆರವುಗೊಂಡ ಮೂರಿನಕಟ್ಟೆಯನ್ನು ಮರುಸ್ಥಾಪಿಸಿ ನೀಡುತ್ತೇವೆ ಎಂದೂ ವರ್ಷಗಳಿಂದ ತಾಲ್ಲೂಕು ಆಡಳಿತ ಹೇಳುತ್ತಿದೆ. ಆದರೆ, ಈವರೆಗೆ ಅದಕ್ಕೆ ಬದಲಿ ವ್ಯವಸ್ಥೆ ಮಾಡಿಲ್ಲ. ಮೂರಿನಕಟ್ಟೆ ಹಿಂದೂಗಳ ಪಾಲಿನ ಪ್ರವಿತ್ರ ಸ್ಥಾನವಾಗಿದೆ ಮತ್ತು ಪ್ರತಿವರ್ಷ ಅಮ್ಮನ ಹೊರೆಯನ್ನು ಈ ಸ್ಥಳದಲ್ಲಿಯೇ ಪೂಜಿಸಲಾಗುತ್ತದೆ. ಈಗ ಈ ಕಟ್ಟೆಯ ಎದುರು ಖಾಸಗಿ ಮನೆ ಕಟ್ಟುತ್ತಿದ್ದಾರೆ ಎಂದರು.

‘ಮೂರಿನಕಟ್ಟೆ ನಮ್ಮ ಆಚರಣೆಯ ಪವಿತ್ರ ಸ್ಥಳವಾಗಿದ್ದು, ತಾಲ್ಲೂಕು ಆಡಳಿತ ಕೂಡಲೇ ಇದೇ ಸ್ಥಳದಲ್ಲಿ ಕಟ್ಟೆ ಕಟ್ಟಿಕೊಡಬೇಕು. ಇಲ್ಲದಿದ್ದರೆ ನಾವೇ ಮುಂದೆ ನಿಂತು ಕಟ್ಟೆ ಕಟ್ಟುತ್ತೇವೆ’ ಎಂದು ಆಗ್ರಹಿಸಿದರು.

ಶಹರ ಠಾಣಾ ಸಿಪಿಐ ದಿವಾಕರ ಮಾತನಾಡಿ, ‘ಮುಂದಿನ ಎರಡು ದಿನಗಳ ಒಳಗೆ ಸಭೆ ಕರೆದು ತಾಲ್ಲೂಕು ಆಡಳಿತದಿಂದ ಕಟ್ಟೆ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಸ್ಥಳೀಯರಾದ ಶ್ರೀನಿವಾಸ ನಾಯ್ಕ ಹನುಮಾನ ನಗರ, ಚಂದ್ರ ನಾಯ್ಕ, ವೆಂಕಟ್ರಮಣ ನಾಯ್ಕ, ನಾಗೇಶ ನಾಯ್ಕ, ಜಗದೀಶ ನಾಯ್ಕ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-20-544693977

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.