ಕಾರವಾರ: ಭಟ್ಕಳ ನಗರದ ಜಾಗಟೆಬೈಲ್ ಸಮೀಪ ಮುರಿನಕಟ್ಟೆ ತೆರವು ನಡೆಸಿದ್ದನ್ನು ಖಂಡಿಸಿ ಬಿಜೆಪಿ, ಹಿಂದೂ ಜಾಗರಣ ವೇದಿಕೆ ಸೇರಿ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಲು ಸಜ್ಜುಗೊಂಡಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಮೇ 27ರ ವರೆಗೆ ಭಟ್ಕಳ ನಗರ, ಅದಕ್ಕೆ ಹೊಂದಿಕೊಂಡಿರುವ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
.ಭಟ್ಕಳ|ಶಿರಾಲಿ ಅಳ್ವೆಕೋಡಿಯಲ್ಲಿ ದುರಂತದಲ್ಲಿ 10 ಮಂದಿ ಜಲಸಮಾಧಿ: ₹5 ಲಕ್ಷ ಪರಿಹಾರ.
ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿ ಹಿಂದೆ ಇದ್ದ ಮುರಿನಕಟ್ಟೆಯನ್ನು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಭಾನುವಾರ ಪುನರ್ ನಿರ್ಮಿಸಿದ್ದರು. ಇದನ್ನು ರಾತ್ರಿ ವೇಳೆಗೆ ಮುಸ್ಲಿಂ ಯುವಕರ ಗುಂಪು ತೆರವುಗೊಳಿಸಿತ್ತು. ಅವರನ್ನು ತಡೆಯಲು ಯತ್ನಿಸಿದ ಪೊಲೀಸರನ್ನು ತಳ್ಳಿಕೊಂಡು ಗುಂಪು ಕಟ್ಟೆಯತ್ತ ನುಗ್ಗಿತ್ತು. ಈ ವೇಳೆ ಲಘು ಲಾಠಿ ಪ್ರಹಾರ ಕೂಡ ನಡೆಸಲಾಗಿದೆ.

ಮುಸ್ಲಿಂ ಸಮುದಾಯದ ಹಲವರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಆದರೂ ಪೊಲೀಸರು ಯಾವುದೇ ಕ್ರಮ ಜರುಗಿಸಿಲ್ಲ ಎಂದು ಆರೋಪಿಸಿ ಬಿಜೆಪಿ ಮುಖಂಡರು, ಹಿಂದೂ ಜಾಗರಣ ವೇದಿಕೆ, ಇತರ ಸಂಘಟನೆಗಳ ಕಾರ್ಯಕರ್ತರು ಭಟ್ಕಳ ಶಹರ ಪೊಲೀಸ್ ಠಾಣೆ ಆವರಣದಲ್ಲಿ ತಡರಾತ್ರಿವರೆಗೂ ಪ್ರತಿಭಟನೆ ನಡೆಸಿದರು.
.ಭಟ್ಕಳ: ಕಪ್ಪೆ ಚಿಪ್ಪು ಆರಿಸಲು ಕಳಿನಟ್ಟಿ ಹೊಳೆಗೆ ಇಳಿದಿದ್ದ 8 ಜನ ಸಾವು!.
'ಮುರಿನಕಟ್ಟೆ ಏಕಾಏಕಿ ನಿರ್ಮಾಣಗೊಂಡಿದ್ದಲ್ಲ. ಹಿಂದಿನಿಂದಲೂ ಇದ್ದ ಕಟ್ಟೆಯನ್ನು ಪುನಃ ನಿರ್ಮಿಸಲಾಗಿದೆ. ಆದರೆ, ಅದನ್ನು ತೆರವುಗೊಳಿಸಿದ ಕ್ರಮ ಅಕ್ಷಮ್ಯ. ಇದರ ವಿರುದ್ಧ ತೀವೃ ಸ್ವರೂಪದ ಪ್ರತಿಭಟನೆ ನಡೆಸುತ್ತೇವೆ' ಎಂದು ಬಿಜೆಪಿ ಮುಖಂಡ ಗೋವಿಂದ ನಾಯ್ಕ ಎಚ್ಚರಿಸಿದ್ದಾರೆ.

ಸದ್ಯ ಭಟ್ಕಳ ಪಟ್ಟಣದಾದ್ಯಂತ ಭಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ. 5ಕ್ಕಿಂತ ಹೆಚ್ಷು ಜನರು ಗುಂಪುಗೂಡದಂತೆ ಆದೇಶಿಸಲಾಗಿದೆ.
.ಭಟ್ಕಳ | ಕಾರು ಅಪಘಾತ: ಐವರಿಗೆ ಗಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.